×
Ad

ಉಡುಪಿ ಜಿಲ್ಲಾ ಲಿಯೋ ಅಧ್ಯಕ್ಷರಾಗಿ ಫೌಝಾನ್ ಅಕ್ರಂ ಆಯ್ಕೆ

Update: 2019-07-27 18:50 IST
 ಫೌಝಾನ್ ಅಕ್ರಂ

ಉಡುಪಿ, ಜು.27: ಉಡುಪಿ, ದಾವಣಗೆರೆ, ಶಿವಮೊಗ್ಗ ಮತ್ತು ಚಿತ್ರದುರ್ಗ ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಕ್ಲಬ್ ಜೂನಿಯರ್ ವಿಭಾಗವಾಗಿರುವ ಲಿಯೋ ಜಿಲ್ಲೆ 317ಸಿ ಇದರ 2019-20ನೆ ಸಾಲಿನ ನೂತನ ಅಧ್ಯಕ್ಷರಾಗಿ ಫೌಝಾನ್ ಅಕ್ರಂ ಆಯ್ಕೆಯಾಗಿದ್ದಾರೆ.

ಉಡುಪಿ ಅಮ್ಮಣ್ಣಿ ರಾಮಣ್ಣಿ ಶೆಟ್ಟಿ ಸಭಾಂಗಣದಲ್ಲಿ ಜು.25ರಂದು ನಡೆದ ಜಿಲ್ಲಾ ಗವರ್ನರ್ ವಿ.ಜಿ.ಶೆಟ್ಟಿ ಮತ್ತು ಅವರ ಸಂಪುಟದ ಪದಗ್ರಹಣ ಸಮಾರಂಭದಲ್ಲಿ ಅಂತಾರಾಷ್ಟ್ರಿಯ ಲಯನ್ ಮಾಜಿ ಅಧ್ಯಕ್ಷ ಬೆರ್ರಿ ಜಿ.ಪಾಲ್ಮರ್ ಮತ್ತು ಅನೇಕ ರಾಷ್ಟ್ರೀಯ ಗಣ್ಯ ನಾಯಕರ ಸಮ್ಮುಖದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ನಿರ್ದೇಶಕ ವಿಜಯ ಕುಮಾರ್ ರಾಜು ನೂತನ ಅಧ್ಯಕ್ಷ ಫೌಝಾನ್ ಅಕ್ರಂ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಕಾರ್ಯದರ್ಶಿಯಾಗಿ ಅಶ್ವತ್ಥ್ ಆಚಾರ್ಯ ಹಾಗೂ ಖಜಾಂಚಿಯಾಗಿ ಸುದೇಷ್ಣ ಪ್ರಭು, ಉಪಾಧ್ಯಕ್ಷರಾಗಿ ಸುಪ್ರಿಯ ಪ್ರಭು ಪ್ರಮಾಣವಚನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಫೌಝಾನ್ ಅಕ್ರಂ ಮಾತನಾಡಿ, ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು, ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಯುವಜನತೆ ಪಾತ್ರದ ಕುರಿತು ಜಾಗೃತಿ, ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಸಣ್ಣ ಪ್ರಾಯದ ಮಕ್ಕಳ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ಪೋಷಕರಲ್ಲಿ ಅರಿವು, ರಕ್ತದಾನದ ಮಹತ್ವ ಮತ್ತು ಅರಿವು, ಪರಿಸರ ರಕ್ಷಣೆಯ ಶಿಕ್ಷಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಲಿಯೋ ಜಿಲ್ಲೆಯ ಮಾರ್ಗದರ್ಶಕರಾಗಿ ಮಾಜಿ ಜಿಲ್ಲಾ ಗವರ್ನರ್ ಜಯಕರ್ ಶೆಟ್ಟಿ ಇಂದ್ರಾಳಿ ಹಾಗೂ ಸಂಯೋಜಕರಾಗಿ ಮುಹಮ್ಮದ್ ಮೌಲಾ ಆಯ್ಕೆಯಾದರು.

ಲಯನ್ಸ್ ಕ್ಲಬ್ ಉಡುಪಿ-ಇಂದ್ರಾಳಿ ಇದರ ಲಿಯೋ ಸದಸ್ಯರಾಗಿರುವ ಫೌಝಾನ್ ಅಕ್ರಂ 2015-16ನೆ ಸಾಲಿನ ಲಿಯೋ ಕ್ಲಬ್ ಅಧ್ಯಕ್ಷರಾಗಿ ತನ್ನ ಸೇವಾ ಚಟುವಟಿಕೆಗಳಿಗಾಗಿ ನಾಲ್ಕು ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಜಿಲ್ಲೆ 317ಸಿಯಲ್ಲಿ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News