ಯೆನೆಪೊಯ ಆಯುರ್ವೇದ ಮೆಡಿಕಲ್ ಕಾಲೇಜು-ಆಸ್ಪತ್ರೆ: ಬಿಎಎಂಎಸ್ ವಿದ್ಯಾರ್ಥಿಗಳ ಶಿಕ್ಷಕ-ಪೋಷಕರ ಸಭೆ
Update: 2019-07-27 19:22 IST
ಮಂಗಳೂರು, ಜು.27: ನರಿಂಗಾನದಲ್ಲಿರುವ ಯೆನೆಪೊಯ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಥಮ ವರ್ಷದ ಬಿಎಎಂಎಸ್ ವಿದ್ಯಾರ್ಥಿಗಳ ಶಿಕ್ಷಕ-ಪೋಷಕರ ಸಭೆಯನ್ನು ಶನಿವಾರ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಯೆನೆಪೊಯ ವಿಶ್ವವಿದ್ಯಾನಿಲಯದ ಪ್ರೊ. ವಿ.ಸಿ.ರಘುವೀರ್, ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಪೋಷಕರ ಹಾಗೂ ಶಿಕ್ಷಕರ ಪಾತ್ರಗಳ ಬಗ್ಗೆ ವಿವರಿಸಿದರು.
ಯೆನೆಪೊಯ ಆಯುರ್ವೇದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ. ವಿದ್ಯಾ ಪ್ರಭಾ ಮಾತನಾಡಿ ಕಾಲೇಜಿನ ನೀತಿ, ನಿಯಮಗಳ ಕುರಿತಾಗಿ ಪೋಷಕರಿಗೆ ವಿವರಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿನ ಸಾಧನೆಗಳನ್ನು ತಿಳಿಸಿ ಶ್ಲಾಘಿಸಿದರು. ಉಪಪ್ರಾಂಶುಾಲೆ ಡಾ.ಶುಭದ ವಿ.ಐ. ವಂದಿಸಿದರು.
ನಂತರ ನಡೆದ ಶಿಕ್ಷಕ-ಪೋಷಕರ ಆಪ್ತ ಸಮಾಲೋಚನೆಯಲ್ಲಿ ದೂರದ ಊರುಗಳಿಂದ ಆಗಮಿಸಿದ ಪೋಷಕರು ಬಹಳಷ್ಟು ಉತ್ಸಾಹದಿಂದ ಭಾಗವಹಿಸಿದರು.