ಬಂಟ್ವಾಳ: ಚೆಸ್ ಪಂದ್ಯಾಟದಲ್ಲಿ ಧ್ಯಾನ್ ಕೃಷ್ಣ ನಿಗೆ ಒಲಿದ ಚಿನ್ನದ ಪದಕ
Update: 2019-07-27 19:33 IST
ಬಂಟ್ವಾಳ: ಇಲ್ಲಿನ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಧ್ಯಾನ್‍ಕೃಷ್ಣ ಶೆಟ್ಟಿ ಇವರು ಮಂಗಳೂರಿನಲ್ಲಿ ಗುರುವಾರ ನಡೆದ ಐಸಿಐಸಿ ಮತ್ತು ಸಿಬಿಎಸ್‍ಸಿ ವಿಭಾಗದ ಅಂತರ್ ಶಾಲಾ ಮಟ್ಟದಲ್ಲಿ ನಡೆದ 5 ಸುತ್ತುಗಳ ಚೆಸ್ ಪಂದ್ಯಾಟದಲ್ಲಿ 5 ಅಂಕ ಗಳಿಸುವ ಮೂಲಕ ರನ್ನರ್ -ವಿನ್ನರ್ ಮತ್ತು ಚಿನ್ನದ ಪದಕ ಗಳಿಸಿ ಗಮನ ಸೆಳೆದಿದ್ದಾರೆ. ಈಗಾಗಲೇ ಬೆಂಗಳೂರಿನ ಗ್ರೀನ್ ವುಡ್ ಅಂತರ್ ರಾಷ್ಟ್ರೀಯ ಶಾಲೆಯಲ್ಲಿ ನಡೆದ ಪಂದ್ಯಾಟದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.
ಬಿ.ಸಿ.ರೋಡಿನ ವಕೀಲ ದಂಪತಿ ರಾಮಚಂದ್ರ ಶೆಟ್ಟಿ ಮತ್ತು ಚೇತನಾ ಆರ್.ಶೆಟ್ಟಿ ಇವರ ಪುತ್ರನಾಗಿರುವ ಧ್ಯಾನ್‍ಕೃಷ್ಣ ಶೆಟ್ಟಿ ಇವರಿಗೆ ಮಂಗಳೂರಿನ ಡೆರಿಕ್ ಸ್ಕೂಲ್ ನಲ್ಲಿ ಡೆರಿಕ್ ಪಿಂಟೋ ಮತ್ತು ಪ್ರಸನ್ನ ರಾವ್, ಬಂಟ್ವಾಳದ ಚಂದ್ರಶೇಖರ ಭಂಡಾರಿ ತರಬೇತಿ ನೀಡುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.