ಮುಂಬೈ: ತೀವ್ರ ಮಳೆಗೆ ಹನ್ನೊಂದು ವಿಮಾನಗಳ ಹಾರಾಟ ರದ್ದು
Update: 2019-07-27 20:40 IST
ಮುಂಬೈ, ಜು.27: ಮುಂಬೈಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವೈಮಾನಿಕ ಸೇವೆಗಳು ಸಮಸ್ಯೆ ಎದುರಿಸುತ್ತಿದ್ದು ಶನಿವಾರದಂದು 11 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದ್ದರೆ ಒಂಬತ್ತು ವಿಮಾನಗಳ ದಿಕ್ಕನ್ನು ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ವಿಮಾನ ನಿಲ್ದಾಣದ ಕಾರ್ಯಾಚರಣೆ ಸಾಮಾನ್ಯವಾಗಿದೆ. ರದ್ದುಗೊಳಿಸಲಾದ ವಿಮಾನಗಳಲ್ಲಿ ಏಳು ಇಲ್ಲಿಂದ ತೆರಳುವ ವಿಮಾನಗಳಾಗಿದ್ದರೆ ನಾಲ್ಕು ಆಗಮಿಸುವ ವಿಮಾನಗಳಾಗಿವೆ ಎಂದು ಅವರು ತಿಳಿಸಿದ್ದಾರೆ. ತೆರಳುವ ಏಳು ವಿಮಾನಗಳ ಪೈಕಿ ಐದು ಇಂಡಿಗೊ ಮತ್ತು ತಲಾ ಒಂದು ಏರ್ ಇಂಡಿಯಾ ಮತ್ತು ಎಮಿರೇಟ್ಸ್ ವೈಮಾನಿಕ ಸಂಸ್ಥೆಗೆ ಸೇರಿದ ವಿಮಾನಗಳಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.