ಇರಾನ್‌ನ ಮುಳುಗಿದ ಹಡಗಿನಿಂದ ಇಬ್ಬರು ಭಾರತೀಯರು ಸಹಿತ 9 ಸಿಬ್ಬಂದಿಯ ರಕ್ಷಣೆ

Update: 2019-07-27 16:17 GMT

ಬಾಕು (ಅಝರ್‌ಬೈಜಾನ್), ಜು. 27: ಅಝರ್‌ಬೈಜಾನ್ ರಾಜಧಾನಿ ಬಾಕುವಿನಲ್ಲಿರುವ ಲಂಕಾರನ್ ಬಂದರಿನ ಸಮೀಪ ಶುಕ್ರವಾರ ಮುಳುಗಿದ ಇರಾನ್‌ನ ‘ಶಬಹಂಗ್’ ಸರಕು ಹಡಗಿನಿಂದ ಇಬ್ಬರು ಭಾರತೀಯ ಮತ್ತು ಏಳು ಇರಾನ್ ಸಿಬ್ಬಂದಿ ಒಳಗೊಂಡಂತೆ ಒಂಬತ್ತು ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಇರಾನ್ ಬಂದರು ಮತ್ತು ಸಾಗರ ಮಾರ್ಗ ಸಂಘಟನೆಯ ಉಪ ಮುಖ್ಯಸ್ಥ ಹೇಳಿದ್ದಾರೆ.

ಮುಳುಗಿದ ಹಡಗಿನ ಸಿಬ್ಬಂದಿ ಅಝರ್‌ಬೈಜಾನ್ ಸರಕಾರಿ ಸಾಗರ ಮಾರ್ಗ ಅಕಾಡೆಮಿಯಿಂದ ನೆರವು ಕೋರಿತ್ತು. ಅಕಾಡೆಮಿಯು ರಕ್ಷಣಾ ಕಾರ್ಯಾಚರಣೆ ನಡೆಸುವುದಕ್ಕಾಗಿ ಘಟನೆ ನಡೆದ ಸ್ಥಳಕ್ಕೆ ಎರಡು ಹೆಲಿಕಾಪ್ಟರ್‌ಗಳು ಮತ್ತು ಗಸ್ತು ನೌಕೆಯೊಂದನ್ನು ಕಳುಹಿಸಿತು ಎಂದು ಇರಾನ್‌ನ ಸರಕಾರಿ ಸುದ್ದಿ ಸಂಸ್ಥೆ ‘ಇರ್ನ’ ವರದಿ ಮಾಡಿದೆ.

ಹಡಗಿನಲ್ಲಿದ್ದ ಎಲ್ಲ 9 ಸಿಬ್ಬಂದಿಯನ್ನು ರಕ್ಷಿಸಿದ ಬೆನ್ನಿಗೇ, ಅದು ಅಝರ್‌ಬೈಜಾನ್ ಜಲಪ್ರದೇಶದಲ್ಲಿ ಸಂಪೂರ್ಣವಾಗಿ ಮುಳುಗಿತು.

ಹಡಗಿನ ಒಳಗೆ ನೀರು ಸೋರಿಕೆಯಾದ ಹಿನ್ನೆಲೆಯಲ್ಲಿ ಅದು ಮುಳುಗಿದೆ. ಹಡಗು ಇರಾನ್‌ನ ಅಂಝಲಿ ಬಂದರಿನಿಂದ ರಶ್ಯದ ಮಖಾಚ್ಕಾಲಕ್ಕೆ ಟೈಲ್ಸ್‌ಗಳನ್ನು ಒಯ್ಯುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News