ಭಾರತೀಯನಿಗೆ ನಿಂದನೆ: ಸಿಂಗಾಪುರ ವ್ಯಕ್ತಿಗೆ ಜೈಲು

Update: 2019-07-27 16:19 GMT

ಸಿಂಗಾಪುರ, ಜು. 27: ಚಂಗಿ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವ ಭಾರತೀಯನೊಬ್ಬನನ್ನು ಹೀಯಾಳಿಸಿ ಜನಾಂಗೀಯವಾದಿ ಮಾತುಗಳನ್ನು ಆಡಿರುವುದಕ್ಕಾಗಿ ಚೀನಾ ಮೂಲದ ಸಿಂಗಾಪುರ ಪ್ರಜೆಯೊಬ್ಬನಿಗೆ ಅಲ್ಲಿನ ನ್ಯಾಯಾಲಯವೊಂದು ನಾಲ್ಕ ವಾರಗಳ ಜೈಲು ವಾಸ ಮತ್ತು 1,000 ಸಿಂಗಾಪುರ ಡಾಲರ್ (50,280 ರೂಪಾಯಿ) ದಂಡ ವಿಧಿಸಿದೆ.

ಆರೋಪಿ 47 ವರ್ಷದ ವಿಲಿಯಮ್ ಅವ್ ಚಿನ್, ಪ್ರತ್ಯೇಕ ಪ್ರಕರಣಗಳಲ್ಲಿ ತನಗಾಗಿ ಎಲವೇಟರ್ ಬಾಗಿಲನ್ನು ತೆರೆದು ಹಿಡಿದಿದ್ದ ಮಹಿಳೆಯೊಬ್ಬರ ಕಾಲು ತುಳಿದು ನೋವುಂಟು ಮಾಡಿದ್ದನು ಹಾಗೂ ಸಿಂಗ್‌ಟೆಲ್ ಶಾಪ್ ಕಾಮ್‌ಸೆಂಟರ್‌ನಲ್ಲಿ ಇಬ್ಬರು ಪುರುಷರ ಮೇಲೆ ನೂಡಲ್ಸ್ ಎರಚಿದ್ದನು.

ತನ್ನ ವಿರುದ್ಧದ ಮೂರು ಆರೋಪಗಳನ್ನು ಅವನು ಶುಕ್ರವಾರ ಒಪ್ಪಿಕೊಂಡನು.

ಆಗಸ್ಟ್ 3ರಂದು 33 ವರ್ಷದ ಭಾರತೀಯ ರಾಮಚಂದಿರನ್ ಉಮಾಪತಿ ಚಂಗಿ ವಿಮಾನ ನಿಲ್ದಾಣದ ಎಲವೇಟರ್ ಪ್ರವೇಶಿಸಿದಾಗ ಅಲ್ಲಿದ್ದ ಆರೋಪಿಯು, ‘‘ನಾನು ಭಾರತೀಯರೊಂದಿಗೆ ಲಿಫ್ಟ್‌ನಲ್ಲಿ ಹೋಗುವುದಿಲ್ಲ, ನೀವು ವಾಸನೆ ಬರುತ್ತೀರಿ’’ ಎಂದು ಹೇಳಿದನು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News