×
Ad

ಸಂತ ಜೋಕಿಂ-ಸಂತ ಅನ್ನಾ ವಾರ್ಷಿಕ ಹಬ್ಬ: ಹಿರಿಯ ಭಗಿನಿಯರಿಗೆ ಸನ್ಮಾನ

Update: 2019-07-27 21:51 IST

ಮಂಗಳೂರು, ಜು.27: ಸಾರ್ಥಕ ಸೇವೆಯಿಂದ ನಾಡನ್ನು ಪುನಿತಗೊಳಿಸಿದ ಸಂತ ಜೋಕಿಂ ಹಾಗೂ ಸಂತ ಅನಾ ಅವರ ವಾರ್ಷಿಕ ಹಬ್ಬವನ್ನು ವಾಮಂಜೂರಿನ ಸಂತ ರೇಮಂಡ್ಸ್ ಕನ್ಯಾಮಠದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆಥನಿ ಮಂಗಳೂರು ಪ್ರಾಂತದ ಪ್ರಾಂತ್ಯಾಧಿಕಾರಿಣಿ ವಂ.ಭಗಿನಿ ಸಿಸಿಲಿಯಾ ಮೆಂಡೋನ್ಸಾ, ಕನ್ಯಾಮಠದ ಹಿರಿಯ ಭಗಿನಿಯರನ್ನು ಫಲ ಪುಷ್ಪ ನೀಡಿ ಸನ್ಮಾನಿಸಿ ಗೌರವಿಸಿದರು.

ಬಳಿಕ ಮಾತನಾಡಿದ ಅವರು, ಕಿರಿಯರಿಗೆ ಹಿರಿಯರು ಎಂದಿಗೂ ನೆರಳಾಗಿರುತ್ತಾರೆ. ಬೆಥನಿ ಸಂಸ್ಥೆಯಲ್ಲಿ ಇಳಿವಯಸ್ಸಿನಲ್ಲಿ ಅವಿರತವಾಗಿ ಸೇವೆಗೈಯುತ್ತಾ, ಅದರಲ್ಲೇ ಸಂತಸ ಕಾಣುವ ಕನ್ಯಾಮಠದ ಹಿರಿಯ ಭಗಿನಿಯರು ಮಾದರಿಯಾಗಿರುವುದು ಪ್ರಶಂಸಾರ್ಹ ಎಂದರು.

ಸುಪೀರಿಯರ್ ಭಗಿನಿ ಗ್ರೇಸಿ ಬಿ.ಎಸ್. ಸ್ವಾಗತಿಸಿದರು. ಭಗಿನಿ ಸಾಧನ ಬಿ.ಎಸ್. ವಂದಿಸಿದರು. ಈ ಸಂದರ್ಭ ಕಾನ್ವೆಂಟ್‌ನ ಎಲ್ಲ ಭಗಿನಿಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News