×
Ad

‘ಕಾರ್ಮೆಲ್ ಇಂಜಿನಿಯಂ’ ಉದ್ಘಾಟನೆ

Update: 2019-07-27 22:03 IST

ಮಂಗಳೂರು, ಜು. 27: ಅಸೋಸಿಯೇಶನ್ ಆಫ್ ಐಸಿಎಸ್‌ಇ ಮತ್ತು ಸಿಬಿಎಸ್‌ಇ ಶಾಲೆಗಳ ಸಾಂಸ್ಕೃತಿಕ ಸ್ಪರ್ಧೆ ‘ಕಾರ್ಮೆಲ್ ಇಂಜಿನಿಯಂ-2019’ನ್ನು ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಶನಿವಾರ ಬೆಳಗ್ಗೆ ಉದ್ಘಾಟಿಸಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಅತಿಥಿ ಅನಿವಾಸಿ ಭಾರತೀಯ ಡಾ.ಆಸ್ಟಿನ್ ಡಿಸೋಜ ಪ್ರಭು, ಭಾರತೀಯ ಪರಂಪರೆ ಸಂಪದ್ಭರಿತವಾಗಿದೆ. ಇದನ್ನು ಯುವಜನಾಂಗ ಎಲ್ಲೆಡೆಯೂ ಹರಡಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿದ್ದ ಗಣ್ಯರು ‘ಟ್ರೆಶರ್ ಬೊನಾನ್‌ಝ’ವನ್ನು ಉದ್ಘಾಟಿಸಿ, ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ನಿಶಾ ಅಲ್ಬುಕರ್ಕ್ ಹಾಗೂ ಶಾಲಾ ಪ್ರಾಂಶುಪಾಲೆ ಭಗಿನಿ ಮೆಲಿಸ್ಸಾ ಎ.ಸಿ. ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ವೇದಾಂತ್ ರಾವ್ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೀದಿನಾಟಕ, ಹಾಸ್ಯಾಭಿನಯ, ಪಾಟ್ ಪೈಂಟಿಂಗ್, ವ್ಯಂಗ್ಯಚಿತ್ರಕಲೆ ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ದ.ಕ. ಜಿಲ್ಲೆಯ ಒಟ್ಟು 25 ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳಿಂದ ಸುಮಾರು 600 ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News