ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಚಟುವಟಿಕೆಗಳಿಗೆ ಚಾಲನೆ
ಮೂಡುಬಿದಿರೆ: ತುಳುವಿನಿಂದ ಕನ್ನಡಕ್ಕೆ, ಕನ್ನಡದಿಂದ ತುಳುವಿಗೆ ಸಾಹಿತ್ಯಕೃತಿಗಳನ್ನು ತರುವ ಕಾರ್ಯ ಸಣ್ಣಮಟ್ಟದಲ್ಲಾದರೂ ನಡೆಯಲಿ, ಶಿಕ್ಷಣ ಸಂಸ್ಥೆಗಳಲ್ಲಿರುವ ತುಳು ಕೇಂದ್ರಗಳಲ್ಲಿ ಪ್ರತಿವರ್ಷ ಚಟುವಟಿಕೆಗಳ ಪುನರಾವರ್ತನೆ ಮಾಡುವಂತೆ, ಸ್ವತಂತ್ರಯೋಚನೆಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದು ಜಾನಪದ ವಿದ್ವಾಂಸ, ಹಾವೇರಿಯ ಕರ್ನಾಟಕ ಜಾನಪದ ವಿ.ವಿ. ನಿವೃತ್ತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಅಭಿಪ್ರಾಯಪಟ್ಟರು.
ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಪ್ರಸಕ್ತ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಭಾಷೆ ಮತ್ತೊಂದು ಭಾಷೆಗೆ ವಿರೋಧಿಯಲ್ಲ. ವ್ಯತ್ಯಾಸಗಳು ಸಹಜ. ಒಂದರಿಂದ ಮತ್ತೊಂದು ಭಾಷೆ ಬೆಳೆಯುತ್ತದೆ. ನಾವು ಜಗದಗಲ ಬೆಳೆಯುವ ಮುನ್ನ ನಾವಿರುವ ತಾಣದಲ್ಲಿ ರುವ ಭಾಷೆ, ಸಂಸ್ಕøತಿಗಳ ಬೇರುಗಳೊಂದಿಗೆ ಗಟ್ಟಿಯಾದಾಗಲೇ ನಮ್ಮ ವ್ಯಕ್ತಿತ್ವ ಅರಳುತ್ತದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆವಹಿಸಿ, ತುಳು ಸಾಹಿತ್ಯ ಆಕಾಡೆಮಿ ಸ್ಥಾಪನೆ, ಉಜಿರೆಯಲ್ಲಿ ವಿಶ್ವ ತುಳು ಸಮ್ಮೇಳನ ಇವೆಲ್ಲ ನಡೆದ ಬಳಿಕ ತುಳುವಿನ ಖ್ಯಾತಿ ವಿಶ್ವದೆಲ್ಲೆಡೆ ಹರಡಿಹೋಗಿದೆ. ತುಳು ಭಾಷೆ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಾಗಿವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಡಳಿತಾಧಿಕಾರಿ ಪ್ರೊ.ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಕೇಂದ್ರದ ಸಂಯೋಜಕ ಡಾ.ಯೋಗೀಶ್ ಕೈರೋಡಿ ಸ್ವಾಗತಿಸಿ ಪ್ರಸ್ತಾವನೆಗೈದರು. ವೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ನಮಿತಾ ವಂದಿಸಿದರು.