×
Ad

ಪಿ.ಎ. ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಸಂಶೋಧನ ಕಾರ್ಯಾಗಾರ

Update: 2019-07-27 22:50 IST

ಕೊಣಾಜೆ: ಸೆಂಟರ್ ಆಫ್ ಎಕ್ಸ್‍ಲೆನ್ಸ್ ಫಾರ್ ರಿಸಾರ್ಚ್ ಇನ್ನೋವೇಶನ್ ಆ್ಯಂಡ್ ಎಂಟರ್ ಪ್ರೆನರ್‍ಶಿಪ್ ಪಿ.ಎ.ಕಾಲೇಜ್, ಇಂಡಿಯನ್ ಸೊಸೈಟಿ ಆಫ್ ಟೆಕ್ನಿಕಲ್ ಎಜ್ಯುಕೇಶನ್ ಮತ್ತು ಮೆಕಾನಿಕಲ್ ವಿಭಾಗದ ಸಹಯೋಗದೊಂದಿಗೆ ಒಂದು ದಿನದ ಸಂಶೋದನೆ, ಬರಹ ಹಾಗೂ ಪ್ರಕಟಣೆ ವಿಷಯದಲ್ಲಿ ಅಂತರಾಷ್ಟ್ರೀಯ ಮಟ್ಟದ ಕಾರ್ಯಗಾರ ಶನಿವಾರ ಪಿ.ಎ.ಕಾಲೇಜಿನಲ್ಲಿ ನಡೆಯಿತು.

ಕಾರ್ಯಗಾರದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಅಬ್ದುಲ್ ಶರೀಫ್ ನೆರವೇರಿಸಿದರು. ಕಾರ್ಯಗಾರದ ನಿರ್ದೇಶಕರಾದ ಡಾ. ರಮೀಝ್ ಎಂ.ಕೆ.  ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಇಮಾಮ್ ಅಬ್ದುಲ್ ರೆಹಮಾನ್ ಬಿನ್ ಫೈಝಲ್, ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಮುಜೀಬ್ ಭಾಗವಹಿಸಿದ್ದರು.

ಸಂಶೋಧನಾ ಡೀನ್ ಡಾ.ಝಾಹಿದ್ ಅನ್ಸಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರೋ. ಝೀಶಾನ್ ಕಿರಾತ್ ಪಠಿಸಿದರು. ಕಾರ್ಯಗಾರ ಸಂಯೋಜಕರಾದ ಪ್ರೋ. ಅಮ್ಜದ್‍ ಖಾನ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News