ಎನ್ನೆಸೆಸ್‍ನಿಂದ ವ್ಯಕ್ತಿತ್ವ ವಿಕಸನ: ಸ್ಟ್ಯಾನಿ ತಾವ್ರೋ

Update: 2019-07-27 17:49 GMT

ಮಂಗಳೂರು: ರಾಷ್ಟ್ರೀಯ ಸೇವಾ ಯೋಜನೆಯು ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವದ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಉತ್ತಮ ನಾಯಕನಾದವನು ಯಾವುದೇ ಅಡ್ಡಿ ಆತಂಕಗಳಿಗೆ ಎದೆಗುಂದುವುದಿಲ್ಲ ಎಂದು ಪಾದುವ ಪ್ರೌಢಶಾಲೆಯ ಅಧ್ಯಾಪಕ ಹಾಗೂ ಎನ್‍ಸಿಸಿ ಅಧಿಕಾರಿ ಸ್ಟ್ಯಾನಿ ತಾವ್ರೋ ಹೇಳಿದ್ದಾರೆ.

ಪಾದುವ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ  ಘಟಕವನ್ನು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಗ್ಲಾಡೀಸ್ ಅಲೋಶಿಯಸ್ ಸಮಾರಂಭವನ್ನು ಉದ್ಘಾಟಿಸಿ, ಮಕ್ಕಳಿಗೆ  ಮಕ್ಕಳಿಗೆ ಶುಭಹಾರೈಸಿದರು. ಪಾದುವ ಪದವಿ ಕಾಲೇಜಿನ ಉಪಪ್ರಾಂಶುಪಾಲ ರೋಶನ್ ಸಾಂತುಮಯೋರ್, ಸ್ವಯಂ ಸೇವಕರಿಗೆ ನಿಸ್ವಾರ್ಥ ಸೇವೆ ಸಲ್ಲಿಸುವಂತೆ ಕರೆ ನೀಡಿದರು.

ಎನ್ನೆಸೆಸ್ ಘಟಕದ ಯೋಜನಾಧಿಕಾರಿ ಯತಿರಾಜ್, ಘಟಕದ ನಾಯಕರಾದ ಧನುಷ್ ಮತ್ತು ಕಾವ್ಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಎನ್ನೆಸೆಸ್ ಘಟಕದ ಸಹ ಯೋಜನಾಧಿಕಾರಿ ಅನಿಲ್ ಡಿ ಮೆಲ್ಲೊ ಸ್ವಯಂ ಸೇವಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರೆ, ಇನ್ನೋರ್ವ ಸಹ ಯೋಜನಾಧಿಕಾರಿ ರಶ್ಮಿ ಪ್ರಿಯಾ ಮಸ್ಕರೇನ್ಹಸ್ ಸ್ವಾಗತಿಸಿದರು. ಸ್ವಯಂಸೇವಕಿ  ಅಶ್ವಿನಿ ವಂದಿಸಿದರೆ, ಸ್ವಯಂಸೇವಕಿ ಮರಿಯಾ ಮೊನಿಶಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News