×
Ad

ಉತ್ತರಪ್ರದೇಶ: ನಿವೃತ್ತ ಸೇನಾಧಿಕಾರಿಯ ಥಳಿಸಿ ಹತ್ಯೆ

Update: 2019-07-28 16:37 IST

ಲಕ್ನೋ, ಜು.28: ಉತ್ತರಪ್ರದೇಶದ ಅಮೇಠಿ ಜಿಲ್ಲೆಯಲ್ಲಿ 64ರ ಪ್ರಾಯದ ನಿವೃತ್ತ ಸೇನಾಧಿಕಾರಿಯನ್ನು ಅಪರಿಚಿತ ಹಂತಕರು ಥಳಿಸಿ ಹತ್ಯೆಗೈದಿರುವ ಆಘಾತಕಾರಿ ಘಟನೆ ನಡೆದಿದೆ.

ಕಮರೌಲಿ ಪೊಲೀಸ್ ಠಾಣಾ ವ್ಯಾಪ್ತಿಯ ಗೊಡಿಯಾನ್ ಕಾ ಪೂರ್ವ ಹಳ್ಳಿಯೊಂದರಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.

ನಿವೃತ್ತ ಯೋಧ ಅಮಾನುಲ್ಲಾ ಹಾಗೂ ಅವರ ಪತ್ನಿ ತಮ್ಮ ಮನೆಯಲ್ಲಿದ್ದ ವೇಳೆ ಜನರ ಗುಂಪು ಅವರ ಮೇಲೆ ಇಟ್ಟಿಗೆಯೊಂದಿಗೆ ದಾಳಿ ನಡೆಸಿದೆ ಎಂದು ಪೊಲೀಸರಿಗೆ ಮೃತ ಯೋಧನ ಪುತ್ರ ತಿಳಿಸಿದ್ದಾಗಿ ಎಎಸ್‌ಪಿ ದಯಾರಾಮ್ ಹೇಳಿದ್ದಾರೆ.

ದಾಳಿಕೋರರು ಅಮಾನುಲ್ಲಾ ಅವರ ತಲೆಗೆ ಗಂಭೀರ ಹಲ್ಲೆ ನಡೆಸಿದ್ದರು.ಹೀಗಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ನಡೆದ ವೇಳೆ ತನ್ನ ಹೆತ್ತವರು ಹೊರತುಪಡಿಸಿ ಕುಟುಂಬದ ಯಾವ ಸದಸ್ಯರೂ ಇರಲಿಲ್ಲ ಎಂದು ಮೃತ ಯೋಧನ ಪುತ್ರ ಪೊಲೀಸರಿಗೆ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ದಯಾರಾಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News