ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿಗೆ ಅಭ್ಯರ್ಥಿ ಸೂಚಿಸಲು ಮನವಿ

Update: 2019-07-28 11:55 GMT

ಮಂಗಳೂರು, ಜು.28: ಸಮುದಾಯ ಮತ್ತು ಸಮಾಜದ ಒಳಿತು ಹಾಗೂ ಪ್ರಗತಿಗಾಗಿ ಯಾವುದೇ ರೀತಿಯ ಪ್ರತಿಫಲಾಪೇಕ್ಷೆಯಿಲ್ಲದೆ, ಪ್ರಶಸ್ತಿ, ಪುರಸ್ಕಾರಗಳ ಆಗ್ರಹವಿಲ್ಲದೆ ಶ್ರಮಿಸುತ್ತಿರುವ ವ್ಯಕ್ತಿಯೊಬ್ಬರಿಗೆ ಯುನಿವೆಫ್ ಕರ್ನಾಟಕ ಪ್ರತಿ ವರ್ಷ 5,000 ರೂ.ನಗದು ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡ ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಈ ವರ್ಷದ (2019-20) ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಶಸ್ತಿಗೆ ಅರ್ಹನಾದ ವ್ಯಕ್ತಿ ಯಾವುದೇ ಸಂಘಟನೆಯ ಸದಸ್ಯನಾಗಿರಬಾರದು. ಯಾವನೇ ವ್ಯಕ್ತಿ ಸ್ವತಃ ಈ ಪ್ರಶಸ್ತಿಗೆ ಅರ್ಜಿ ಹಾಕಲು ಅವಕಾಶವಿಲ್ಲ. ದ.ಕ. ಜಿಲ್ಲೆಯ ಮುಸ್ಲಿಮ್ ಸಮುದಾಯದ ಇಂತಹ ವ್ಯಕ್ತಿಗಳ ಪರಿಚಯವಿರುವವರು ಪ್ರಶಸ್ತಿಗೆ ಹೆಸರು ಸೂಚಿಸಬಹುದು.

ಈ ಪ್ರಶಸ್ತಿಯನ್ನು ಆ.15ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ನಗರದ ಫಳ್ನೀರ್‌ನಲ್ಲಿರುವ ದಾರುಲ್ ಇಲ್ಮ್ನ ಸಭಾಂಗಣದಲ್ಲಿ ನೀಡಲಾಗುವುದು. ಹಾಗಾಗಿ ಆಗಸ್ಟ್ 8ರ ಒಳಗಾಗಿ ಅರ್ಹ ಅಭ್ಯರ್ಥಿಗಳ ವಿವರಗಳನ್ನು ಸಂಚಾಲಕರು, ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ ವಿಭಾಗ, ಯುನಿವೆಫ್ ಕರ್ನಾಟಕ, ದಾರುಲ್ ಇಲ್ಮ್, ಒಂದನೇ ಮಹಡಿ, ಲುಲು ಸೆಂಟರ್, ಇಂದಿರಾ ಆಸ್ಪತ್ರೆ ಬಳಿ, ಫಳ್ನೀರ್, ಮಂಗಳೂರು - 575 001 ಅಥವಾ ಮೊ.ಸಂ: 9964024816/9845199931 ವಾಟ್ಸ್‌ಆ್ಯಪ್ ಸಂಖ್ಯೆಗೆ ಕಳುಹಿಸಬಹುದು. ಹೆಚ್ಚಿನ ವಿವರಗಳಿಗೆ ಪ್ರಶಸ್ತಿಯ ಸಂಚಾಲಕ ಅಬ್ದುಲ್ಲಾ ಪಾರೆ ಅವರನ್ನು ಮೊ.ಸಂ: 9964024816 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News