ಮಂಗಳೂರು: ರಾಮಕೃಷ್ಣ ಮಿಶನ್ ವತಿಯಿಂದ ಶ್ರಮದಾನ
Update: 2019-07-28 17:31 IST
ಮಂಗಳೂರು, ಜು.28: ಸ್ವಚ್ಛ ಮಂಗಳೂರು ಅಭಿಯಾನದ ಅಂಗವಾಗಿ ರಾಮಕೃಷ್ಣ ಮಿಶನ್‌ನ 5ನೆ ಹಂತದ 34ನೆ ಶ್ರಮದಾನವು ನಗರದ ಸ್ಟೇಟ್‌ಬ್ಯಾಂಕ್ ಹಾಗೂ ಬಂದರ್ ಪ್ರದೇಶದಲ್ಲಿ ರವಿವಾರ ನಡೆಯಿತು.
ಸ್ಮಾರ್ಟ್ ಸಿಟಿಯ ಪ್ರಧಾನ ವ್ಯವಸ್ಥಾಪಕ ಡಿ. ಮಹೇಶ್ ಕುಮಾರ್, ಶಿಕ್ಷಕಿ ರಾಜೀವಿ ಚಂದ್ರಶೇಖರ್ ಹ್ಯಾಮಿಲ್ಟನ್ ವೃತ್ತದ ಬಳಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭ ಸ್ವಚ್ಛ ಮನಸ್ಸು ಅಭಿಯಾನದ ಸಂಯೋಜಕ ರಂಜನ್ ಬೆಳ್ಳರ್ಪಾಡಿ, ಸತ್ಯಾನಂದ ಭಟ್, ಸುರೇಂದ್ರ ನಾಯಕ್, ಕಿರಣ ಫರ್ನಾಂಡಿಸ್, ಸಂದೀಪ್ ಕೋಡಿಕಲ್, ಮಹೇಶ್ ಕೆ.ಕೆ. ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಮಲಾಕ್ಷ ಪೈ, ಅಭಿಷೇಕ್ ಎಸ್., ಮೆಹಬೂಬ್ ಖಾನ್, ಅವಿನಾಶ್ ಅಂಚನ್, ಉಮಾಕಾಂತ್ ಸುವರ್ಣ ಮತ್ತಿತರರು ಪಾಲ್ಗೊಂಡಿದ್ದರು.