ಮೂಡುಬಿದಿರೆ: ಸ್ಫೂರ್ತಿ ಶಾಲೆಯಲ್ಲಿ ಮಾಹಿತಿ ಕಾರ್ಯಕ್ರಮ
ಮೂಡುಬಿದಿರೆ: ವಿಕಲಚೇತನರ ಅಭಿವೃದ್ಧಿಗಾಗಿ ಪಂಚಾಯಿತಿಗಳಲ್ಲಿ 2016ರಿಂದ ಹೆಚ್ಚಿನ ಅನುದಾನವನ್ನು ಮೀಸಲಿರಿಸುತ್ತಿದ್ದು ಇದರಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುನರ್ವಸತಿಗೆ, ಬೋಧನಾ ಸಾಮಾಗ್ರಿ ಖರೀದಿಸಲು, ಸಾರಿಗೆ ವೆಚ್ಚ, ಪ್ರತಿಭಾ ಪ್ರದರ್ಶನಕ್ಕೆ ವಿನಿಯೋಗಿಸಲು ಅವಕಾಶವಿದೆ ಎಂದು ಬಜ್ಪೆ ಗ್ರಾ.ಪಂ. ಪಿಡಿಒ ಸಾಯೀಶ ಚೌಟ ಹೇಳಿದರು.
ಅರಮನೆ ಬಾಗಿಲು ಬಳಿಯಿರುವ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿಕಲಚೇತನರಿಗೆ ಪಂಚಾಯಿತಿನಿಂದ ಸಿಗುವ ಸವಲತ್ತುಗಳ ಬಗ್ಗೆ ಹೆತ್ತವರಿಗೆ ಮಾಹಿತಿಯನ್ನು ನೀಡಿದರು.
ಸಾಮಾಜಿಕ ಪುನರ್ವಸತಿಗೆ, ಮನೆ ರಿಪೇರಿಗೆ, ಶೌಚಾಲಯ ದುರಸ್ಥಿ ಹಾಗೂ ನಿರ್ಮಾಣಕ್ಕೆ, ವಿವಾಹ ಖರ್ಚಿಗೆ, ವ್ಯಾಪಾರಕ್ಕಿ ಹಾಗೂ ವೈದ್ಯಕೀಯ ಖರ್ಚಿಗೂ ಅನುದಾನವನ್ನು ಭರಿಸಲು ಅವಕಾಶವಿದ್ದು ಇದನ್ನು ತಾವು ಪಂಚಾಯಿತಿಗಳಿಗೆ ತೆರಳಿ ಸ್ವತ: ಅಧಿಕಾರಿಗಳ ಬಳಿಯೇ ನೇರವಾಗಿ ಮಾತನಾಡಿ ನಿಮಗೆ ಸರ್ಕಾರವು ನೀಡುವ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಅನಿತಾ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.