×
Ad

ಪ್ರೇಮ ವಿವಾಹ ವಿರೋಧಿಸಿ ಜೀವಬೆದರಿಕೆ: ಯುವತಿಯ ದೂರು

Update: 2019-07-28 23:28 IST

ಲಕ್ನೊ, ಜು.28: ಪ್ರೀತಿಸಿ ವಿವಾವಾದ ತಮಗೆ ಜೀವಬೆದರಿಕೆ ಕರೆ ಬರುತ್ತಿದ್ದು ರಕ್ಷಣೆ ನೀಡಬೇಕೆಂದು ನವದಂಪತಿ ಪೊಲೀಸರಿಗೆ ದೂರು ನೀಡಿರುವುದಾಗಿ ವರದಿಯಾಗಿದೆ. ಮೆಹ್ರಾಜ್ ಎಂಬ ಯುವತಿ ದೂರು ಸಲ್ಲಿಸಿದವರು. ತಾನು ಸ್ವಇಚ್ಛೆಯಿಂದ ಮಾಶೂಕ್ ಅಲಿ ಎಂಬಾತನನ್ನು ಪ್ರೇಮಿಸಿ ವಿವಾಹವಾಗಿದ್ದೇನೆ. ಆದರೆ ಇದನ್ನು ತನ್ನ ಹೆತ್ತವರು ವಿರೋಧಿಸಿ ತಮಗೆ ಮತ್ತು ಪತಿಯ ಕುಟುಂಬದವರಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ಮೆಹ್ರಾಜ್ ದೂರು ನೀಡಿದ್ದಾರೆ.

ತನ್ನ ಪುತ್ರಿಯನ್ನು ಅಪಹರಿಸಲಾಗಿದೆ ಎಂದು ಯುವತಿಯ ತಂದೆ ದೂರು ದಾಖಲಿಸಿರುವುದಾಗಿ ಮೊರಾದಾಬಾದ್ ಪೊಲೀಸ್ ಅಧೀಕ್ಷಕ ಅಂಕಿತ್ ಮಿತ್ತಲ್ ಹೇಳಿದ್ದಾರೆ. ಯುವಕ ಯುವತಿಯ ವಯಸ್ಸಿನ ದಾಖಲೆ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಈ ಮಧ್ಯೆ, ಇನ್ನೋರ್ವ ಯುವತಿಯೂ ಸಾಮಾಜಿಕ ಮಾಧ್ಯಮದ ಮೂಲಕ ಇದೇ ರೀತಿಯ ಹೇಳಿಕೆ ನೀಡಿದ್ದು ಪ್ರೀತಿಸಿ ವಿವಾಹವಾಗಿರುವ ತಮಗೆ ಬೆದರಿಕೆ ಒಡ್ಡಲಾಗಿದೆ ಎಂದು ಹೇಳಿದ್ದಾಳೆ. ದಂಪತಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಆ ಬಳಿಕ ವಿಷಯ ಸ್ಪಷ್ಟವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News