ಪ್ರಜ್ಞೇಶ್ ಗುಣೇಶ್ವರನ್ ಭರ್ಜರಿ ಆರಂಭ

Update: 2019-07-30 18:00 GMT

 ಲಾಸ್ ಕಾಬೊಸ್(ಮೆಕ್ಸಿಕೊ), ಜು.30: ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ವಿಶ್ವದ ನಂ.67ನೇ ಆಟಗಾರ ಜಾನ್ ಮಿಲ್‌ಮ್ಯಾನ್‌ರನ್ನು ಮಣಿಸಿ ಎಟಿಪಿ ಲಾಸ್ ಕಾಬೊಸ್ ಟೆನಿಸ್ ಇವೆಂಟ್‌ನಲ್ಲಿ ಭರ್ಜರಿ ಆರಂಭ ಪಡೆದಿದ್ದಾರೆ.

ಭಾರತದ ಎಡಗೈ ಆಟಗಾರ, ವಿಶ್ವದ ನಂ.90ನೇ ರ್ಯಾಂಕಿನ ಪ್ರಜ್ಞೇಶ್ ಆಸ್ಟ್ರೇಲಿಯದ ಎದುರಾಳಿ ಮಿಲ್‌ಮ್ಯಾನ್‌ರನ್ನು ಸೋಮವಾರ ರಾತ್ರಿ 1 ಗಂಟೆ ಹಾಗೂ 49 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 6-4, 1-6, 6-2 ಸೆಟ್‌ಗಳ ಅಂತರದಿಂದ ಮಣಿಸಿದರು.

ಪ್ರಜ್ಞೇಶ್ ಮುಂದಿನ ಸುತ್ತಿನಲ್ಲಿ ವಿಶ್ವದ ನಂ.28ನೇ ಆಟಗಾರ ಟೇಲರ್ ಫ್ರಿಟ್ಝ್ ಸವಾಲನ್ನು ಎದುರಿಸಲಿದ್ದಾರೆ. ಫ್ರಿಟ್ಜ್ ಇತ್ತೀಚೆಗೆ ಈಸ್ಟ್‌ಬೌರ್ನ್ಸ್‌ನಲ್ಲಿ ಮೊದಲ ಬಾರಿ ಎಟಿಪಿ ಟೂರ್ ಪ್ರಶಸ್ತಿ ಜಯಿಸಿದ್ದರು. 21ರ ಹರೆಯದ ಅಮೆರಿಕದ ಆಟಗಾರ ಜರ್ಮನಿಯ ಕ್ವಾಲಿಫೈಯರ್ ಡೊಮಿನಿಕ್ ಕೊಯೆಫೆರ್ ವಿರುದ್ಧ ಜಯ ಸಾಧಿಸಿದ್ದರು.

ಡಬಲ್ಸ್ ವಿಭಾಗದಲ್ಲಿ ಭಾರತದ ಜೋಡಿ ಜೀವನ್ ನೆಡುನ್‌ಚೆಝಿಯನ್ ಹಾಗೂ ಪೂರವ್ ರಾಜಾ ಮೊದಲ ಸುತ್ತಿನ ಪಂದ್ಯದಲ್ಲಿ ಲುಕಾಸ್ ಪೌಲಿ ಹಾಗೂ ಗ್ರೆಗೊರಿ ಬರೆರಿ ವಿರುದ್ಧ 3-6, 3-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

ದಿವಿಜ್ ಶರಣ್ ಹಾಗೂ ಜೊನಾಥನ್ ಎಲ್ರಿಚ್ ನಾಲ್ಕನೇ ಶ್ರೇಯಾಂಕದ ಬೆನ್ ಮೆಕ್‌ಲಾಚ್ಲಾನ್ ಹಾಗೂ ಜಾನ್ ಪ್ಯಾಟ್ರಿಕ್-ಸ್ಮಿತ್‌ರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸ ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News