ಸಿದ್ಧಾರ್ಥ ಪ್ರಕರಣ ತನಿಖೆ ಚುರುಕು: ಮಂಗಳೂರು ಕಮಿಷನರ್
Update: 2019-07-31 20:19 IST
ಮಂಗಳೂರು, ಜು.31: ಉದ್ಯಮಿ ವಿ.ಜಿ. ಸಿದ್ಧಾರ್ಥ ಅವರ ಮೃತದೇಹ ಬುಧವಾರ ಬೆಳಗ್ಗೆ ಹೊಯಿಗೆ ಬಝಾರ್ ಬಳಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆ ಮುಂದುವರಿಯಲಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಪ್ರಕರಣದ ತನಿಖೆಗೆ ಸಿಸಿಬಿ ತಂಡವನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದ್ದು, ತನಿಖೆ ಚುರುಕು ಪಡೆದಿದೆ. ಸಮರೋಪಾದಿಯಲ್ಲಿ ಎಲ್ಲ ಮಾಹಿತಿ ಕಲೆ ಹಾಕಲಾಗುವುದು. ಸಿದ್ಧಾರ್ಥ ಅವರ ಮೃತದೇಹವನ್ನು ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಇನ್ನು ಫೊರೇನ್ಸಿಕ್ ವರದಿಯು ಶೀಘ್ರದಲ್ಲಿಯೇ ಬರಲಿದೆ ಎಂದು ಅವರು ಹೇಳಿದರು.