×
Ad

ಬಂಟ್ವಾಳ: ಆನ್‍ಲೈನ್ ಮರಳು ಬುಕ್ಕಿಂಗ್ ಪುನರ್ ಆರಂಭ

Update: 2019-07-31 21:31 IST

ಬಂಟ್ವಾಳ, ಜು. 26: "ಡಿ.ಕೆ. ಸ್ಯಾಂಡ್ ಬಝಾರ್"ನಿಂದ ಆನ್‍ಲೈನ್ ಮೂಲಕ ಸಾರ್ವಜನಿಕರಿಗೆ ಕಡಿಮೆ ದರಲ್ಲಿ ವಿತರಣೆಯಾಗುತ್ತಿದ್ದ ಮರಳು ಬುಕ್ಕಿಂಗ್ ವ್ಯವಸ್ಥೆಯು ಬುಧವಾರ ಮತ್ತೆ ಪುನರಾಂಭಗೊಂಡಿದೆ.

ಮಳೆಗಾಲದಿಂದಾಗಿ ಡ್ರೆಜ್ಜಿಂಗ್‍ನಿಂದ ಮರಳಿನ ಲಭ್ಯತೆ ಕಡಿಮೆ ಇರುವುದರಿಂದ ಹಾಗೂ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ವಾರಗಳ ಕಾಲ ಬುಕ್ಕಿಂಗ್ ಕಾರ್ಯವನ್ನು ನಿಲ್ಲಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪತ್ರಿಕೆಗೆ ತಿಳಿಸಿದ್ದರು. ಈ ನಿಟ್ಟಿನಲ್ಲಿ ಕಳೆದ ವಾರಗಳಿಂದ ಆನ್‍ಲೈನ್ ಮೂಲಕ ಮರಳು ಬುಕ್ಕಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಪ್ರತಿಕೂಲ ಹವಾಮಾನದಿಂದ ಮುಂದಿನ ಪ್ರಕಟನೆಯವರೆಗೆ ಮರಳು ಬುಕ್ಕಿಂಗ್ ಅನ್ನು ಸ್ಥಗಿತಗೊಳಿಸಲಾಗಿತ್ತು.

ಪ್ರಸ್ತುತ ಸ್ವೀಕರಿಸಿರುವ ಬುಕ್ಕಿಂಗ್‍ಗಳನ್ನು ಆದ್ಯತೆಯ ಮೇರೆಗೆ ಸರಬರಾಜು ಮಾಡಲಾಗುವುದು ಎಂದು ದ.ಕ. ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ವೆಬ್‍ಸೈಟ್ ಪ್ರಕಟನೆ ತಿಳಿಸಿತ್ತು. ಇದೀಗ ಬುಧವಾರ ವೆಬ್‍ಸೈಟ್ ಮೂಲಕ ಆನ್‍ಲೈನ್ ಮರಳು ಕಾಯ್ದಿರಿಸುವಿಕೆಗೆ ಪುನರಾಂಭಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News