ಆ. 2ರಿಂದ ಸರಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್
ಉಡುಪಿ, ಜು. 31: 2018-19ನೇ ಸಾಲಿನ ಸರಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಘಟಕದ ಒಳಗಿನ ಕೋರಿಕೆ ವರ್ಗಾವಣಾ ಕೌನ್ಸಿಲಿಂಗ್ ಪ್ರಕ್ರಿಯೆ ಯನ್ನು ಶೇ.5ರ ಮಿತಿಗೊಳಿಸಿ, ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಆಗಸ್ಟ್ 2, 3 ಮತ್ತು 5ರಂದು ನಡೆಸಲಾಗುವುದು.
ಆ.2ರಂದು ಬೆಳಗ್ಗೆ ಅಂತಿಮ ಆದ್ಯತಾ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 1ರಿಂದ 75ರವರೆಗೆ ಹಾಗೂ ಅಪರಾಹ್ನ 76 ರಿಂದ 150ರವರೆಗಿನ ಶಿಕ್ಷಕರಿಗೆ, ಆ.3ರಂದು ಬೆಳಗ್ಗೆ ಕ್ರಮಸಂಖ್ಯೆ 151ರಿಂದ 250 ರವರೆಗೆ ಹಾಗೂ ಅಪರಾಹ್ನ 251ರಿಂದ 350ರವರೆಗಿನ ಶಿಕ್ಷಕರಿಗೆ ಹಾಗೂ ಆ.5ರಂದು ಬೆಳಗ್ಗೆ ಕ್ರಮಸಂಖ್ಯೆ 351ರಿಂದ 500ರವರೆಗೆ ಹಾಗೂ ಅಪರಾಹ್ನ 501ರಿಂದ ಆದ್ಯತಾ ಪಟ್ಟಿಯ ಅಂತ್ಯದವರೆಗಿನ ಶಿಕ್ಷಕರಿಗೆ ಕೌನ್ಸೆಲಿಂಗ್ ನಡೆಯಲಿದ್ದು, ಅಂತಿಮ ಆದ್ಯತಾ ಪಟ್ಟಿಯಲ್ಲಿರುವ ಸಂಬಂಧಪಟ್ಟ ಶಿಕ್ಷಕರು ವೇಳಾಪಟ್ಟಿಯಂತೆ ಕೌನ್ಸಿಲಿಂಗ್‌ಗೆ ಹಾಜರಾಗುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಆಯಾಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.