1,000 ವಲಸಿಗ ಮಕ್ಕಳನ್ನು ಹೆತ್ತವರಿಂದ ಬೇರ್ಪಡಿಸಿದ ಟ್ರಂಪ್ ಆಡಳಿತ

Update: 2019-07-31 16:47 GMT

ಲಾಸ್ ಏಂಜಲೀಸ್, ಜು. 31: ಕಳೆದ ವರ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ಸುಮಾರು 1,000 ಮಕ್ಕಳನ್ನು ಅವರ ಹೆತ್ತವರಿಂದ ಬೇರ್ಪಡಿಸಿದೆ ಎಂದು ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ (ಎಸಿಎಲ್‌ಯು) ಮಂಗಳವಾರ ಹೇಳಿದೆ.

ಈ ಪ್ರವೃತ್ತಿಯನ್ನು ನಿಲ್ಲಿಸುವಂತೆ ಅಮೆರಿಕದ ನ್ಯಾಯಾಧೀಶರೊಬ್ಬರು ನೀಡಿದ ಆದೇಶದ ಹೊರತಾಗಿಯೂ ಹೀಗೆ ನಡೆದಿದೆ ಎಂದು ಸ್ಯಾನ್‌ಡೀಗೊದಲ್ಲಿರುವ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ ಅದು ತಿಳಿಸಿದೆ.

ಸಾರಿಗೆ ನಿಯಮ ಉಲ್ಲಂಘನೆ ಮುಂತಾದ ಅಪರಾಧಗಳನ್ನು ಈ ವಲಸಿಗ ಮಕ್ಕಳ ಹೆತ್ತವರು ಮಾಡಿದ್ದಾರೆ ಎಂಬುದಾಗಿ ಟ್ರಂಪ್ ಆಡಳಿತ ಆರೋಪಿಸಿ ಅವರನ್ನು ಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News