ಚಂಡಮಾರುತ ಎದುರಿಸಲು ಹಾಂಕಾಂಗ್ ಸಿದ್ಧತೆ
Update: 2019-07-31 22:21 IST
ಹಾಂಕಾಂಗ್, ಜು. 31: ಚಂಡಮಾರುತವೊಂದನ್ನು ಎದುರಿಸಲು ಸಿದ್ಧವಾಗಿರುವ ಹಾಂಕಾಂಗ್ ಮಂಗಳವಾರ ಅಪಾಯ ಸಂಕೇತ ಮಟ್ಟ 8ನ್ನು ಹಾರಿಸಿದೆ. ಇದು ಮೂರನೇ ಗರಿಷ್ಠ ಅಪಾಯ ಸಂಕೇತ ಮಟ್ಟವಾಗಿದ್ದು, 10 ಗರಿಷ್ಠ ಅಪಾಯ ಸಂಕೇತ ಮಟ್ಟವಾಗಿದೆ.
ಶಾಲೆಗಳು ಮತ್ತು ಹಣಕಾಸು ಮಾರುಕಟ್ಟೆಗಳನ್ನು ಇಂದು ಮುಚ್ಚಲಾಗಿತ್ತು. ಸರಕಾರಿ ನೌಕರರು ಬೇಗನೇ ಮನೆ ಸೇರಿದ್ದಾರೆ.
‘ವಿಫಾ’ ಚಂಡಮಾರುತದ ಪರಿಣಾಮವಾಗಿ ನಗರದಲ್ಲಿ ಭಾರೀ ಮಳೆಯಾಗಿದೆ ಹಾಗೂ ಬಲವಾದ ಗಾಳಿ ಬೀಸಿದೆ. ಸಮುದ್ರ ಪ್ರಕ್ಷುಬ್ಧವಾಗಿದೆ.