ಹೊಗೆ ವಂಚನೆ: ಆಡಿ ಮಾಜಿ ಮುಖ್ಯಸ್ಥನ ವಿರುದ್ಧ ದೋಷಾರೋಪ
ಫ್ರಾಂಕ್‌ಫರ್ಟ್ (ಜರ್ಮನಿ), ಜು. 31: ಫೋಕ್ಸ್‌ವಾಗನ್ ಡೀಸೆಲ್ ಕಾರುಗಳ ಹೊಗೆ ಹೊರಸೂಸುವಿಕೆ ಪ್ರಮಾಣವನ್ನು ಕಡಿಮೆ ತೋರಿಸುವುದಕ್ಕಾಗಿ ವಿಶಿಷ್ಟ ಉಪಕರಣಗಳನ್ನು ಅಳವಡಿಸಿದ ಹಗರಣಕ್ಕೆ ಸಂಬಂಧಿಸಿ ಆಡಿ ಕಾರು ತಯಾರಿಕಾ ಸಂಸ್ಥೆಯ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೂಪರ್ಟ್ ಸ್ಟಾಡ್ಲರ್ ವಿರುದ್ಧ ದೋಷಾರೋಪಣೆ ಹೊರಿಸಿರುವುದಾಗಿ ಜರ್ಮನ್ ಪ್ರಾಸಿಕ್ಯೂಟರ್‌ಗಳು ಮಂಗಳವಾರ ಹೇಳಿದ್ದಾರೆ.
‘‘ಪ್ರೊಫೆಸರ್ ರೂಪರ್ಟ್ ಸ್ಟಾಡ್ಲರ್ ಮತ್ತು ಇತರ ಮೂವರು ಆರೋಪಿಗಳ ವಿರುದ್ಧ ವಂಚನೆ, ತಪ್ಪು ಪ್ರಮಾಣಪತ್ರಗಳನ್ನು ನೀಡಿದ ಹಾಗೂ ಅಕ್ರಮ ಜಾಹೀರಾತು ನೀಡಿದ ಆರೋಪಗಳನ್ನು ಹೊರಿಸಲಾಗಿದೆ’’ ಎಂದು ಮ್ಯೂನಿಕ್‌ನಲ್ಲಿ ಪ್ರಾಸಿಕ್ಯೂಟರ್‌ಗಳು ತಿಳಿಸಿದರು.
ಜೇಮ್ಸ್‌ಟೌನ್‌ನಲ್ಲಿ, 400 ವರ್ಷಗಳ ಹಿಂದೆ ಬ್ರಿಟಿಷ್ ವಸಾಹತುಗಾರರು ಸ್ಥಾಪಿಸಿದ ಮೊದಲ ಶಾಸಕಾಂಗದ ವಾರ್ಷಿಕ ದಿನದ ಸಂದರ್ಭದಲ್ಲಿ ಮಂಗಳವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿದಾಗ, ಅವರ ಭಾಷಣಕ್ಕೆ ಅಡ್ಡಿಪಡಿಸಿದ ವರ್ಜೀನಿಯದ ಶಾಸಕ ಇಬ್ರಾಹೀಮ್ ಸಮೀರಾರನ್ನು ಹೊರಗೆ ಕಳುಹಿಸಲಾಯಿತು.