ಪುತ್ತೂರು ತಾಪಂ ನಲ್ಲಿ ಪದೋನ್ನತಿ-ವರ್ಗಾವಣೆಗೊಂಡ ಅಧಿಕಾರಿಗಳಿಗೆ ಬೀಳ್ಕೊಡುಗೆ
ಪುತ್ತೂರು: ದಾವಣಗೆರೆ ಜಿಲ್ಲಾ ಪಂಚಾಯತ್ ಯೋಜನಾಧಿಕಾರಿಯಾಗಿ ಪದೋನ್ನತಿ ಹೊಂದಿ ವರ್ಗಾವಣೆಗೊಂಡ ಪುತ್ತೂರು ತಾಪಂ ಕಾರ್ಯನಿರ್ವಾಹಣಾಧಿಕಾರಿ ಜಗದೀಶ್ ಎಸ್ ಮತ್ತು ಸುಳ್ಯಕ್ಕೆ ವರ್ಗಾವಣೆಗೊಂಡ ಬಲ್ನಾಡು ಗ್ರಾ.ಪಂ ಕಾರ್ಯದರ್ಶಿ ರಮೇಶ್ ಅವರಿಗೆ ಬೀಳ್ಕೊಡುಗೆ ಬುಧವಾರ ನಡೆಯಿತು.
ತಾಲೂಕು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೌಕರ ಸಂಘದ ವತಿಯಿಂದ ತಾಪಂ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಮಾತನಾಡಿ ಸರ್ಕಾರಿ ಅಧಿಕಾರಿ ನಿಂತ ನೀರಾಗಬಾರದು. ತಾನು ಎಷ್ಟು ವರ್ಷ ಅಧಿಕಾರದಲ್ಲಿದ್ದೇನೆ ಎಂಬುದು ಮುಖ್ಯವಲ್ಲ ಅಧಿಕಾರದಲ್ಲಿರುವ ಸಮಯ ಎನು ಕೆಲಸ ಮಾಡಿದ್ದೇವೆ ಎಂಬುದು ಮುಖ್ಯ ಎಂಬುದಕ್ಕೆ ಉತ್ತಮ ಸಾಧನೆ ಮಾಡಿದ ಜಗದೀಶ್ ಅವರು ಎಲ್ಲರಿಗೂ ಮಾದರಿಯಾಗಲಿದ್ದಾರೆ ಎಂದರು.
ದಾವಣಗೆರೆ ಜಿ.ಪಂ ಗೆ ಜಿಲ್ಲಾಯೋಜನಾಧಿಕಾರಿಯಾಗಿ ಪದೋನ್ನತಿ ಹೊಂದಿ ವರ್ಗಾವಣೆಗೊಂಡ ಜಗದೀಶ್ ಎಸ್ ಅವರು ಕೃತಜ್ಞತೆ ಸಲ್ಲಿಸಿದರು. ಜಿ.ಪಂ ಸದಸ್ಯ ಪಿ.ಪಿ.ವರ್ಗೀಸ್, ತಾ.ಪಂ ಉಪಾಧ್ಯಕ್ಷೆ ಲಲಿತಾ ಈಶ್ವರ್, ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ತಾಪಂ ನೂತನ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ವತಿಯಿಂದ ಮತ್ತು ವೈಯುಕ್ತಿಕವಾಗಿ ಜಗದೀಶ್ ಎಸ್ ಮತ್ತು ರಮೇಶ್ ಅವರನ್ನು ಸನ್ಮಾನಿಸಲಾಯಿತು.
ಜಿ.ಪಂ ಸದಸ್ಯ ಸರ್ವೋತ್ತಮ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾ.ಪಂ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಭವಾನಿ ಚಿದಾನಂದ, ಗಣೇಶ್ ಕೈಕುರೆ, ಮೀನಾಕ್ಷಿ ಮಂಜುನಾಥ್, ತೇಜಸ್ವಿನಿ, ಕುಸುಮ, ರಾಜೇಶ್ವರಿ, ಮುಕುಂದ ಗೌಡ, ಜಯಂತಿ ಗೌಡ, ನೆಲ್ಯಾಡಿ ಪಿಡಿಒ ಮಂಜುಳಾ, ಗೊಳಿತ್ತೊಟ್ಟು ಗ್ರಾ.ಪಂ ಪಿಡಿಒ ನಯನಾ, ಕಡಬ ಪಿಡಿಒ ಚೆನ್ನಪ್ಪ, ನೂಜಿಬಾಳ್ತಿಲ ಪಿಡಿಒ ಆನಂದ್ ಗೌಡ, ಆರ್ಯಾಪು ಪಿಡಿಒ ಶೈಲಜಾ ಭಟ್ ಅನಿಸಿಕೆ ವ್ಯಕ್ತಪಡಿಸಿದರು.
ಪಂಚಾಯತ್ ನೌಕರರ ಸಂಘದ ಅಧ್ಯಕ್ಷ ಜೆರಾಲ್ಡ್ ಡಿ ಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ವ್ಯವಸ್ಥಾಪಕ ಶಿವಪ್ರಕಾಶ್ ಅಡ್ಪಂಗಾಯ ಸ್ವಾಗತಿಸಿದರು. ನರಿಮೊಗರು ಪಿ.ಡಿ.ಒ ರವಿಚಂದ್ರ ವಂದಿಸಿದರು. ಇತ್ತಿಚೆಗೆ ನಿಧನರಾದ ತಾ.ಪಂ ಕಚೇರಿಯ ಸಿಬಂದಿ ಪದ್ಮಾವತಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.