ವೆಲ್ಫೇರ್ ಪಾರ್ಟಿ ಪುತ್ತೂರು ವಲಯ ಕಾರ್ಯಾಧ್ಯಕ್ಷರಾಗಿ ಇಬ್ರಾಹಿಮ್ ಅಜ್ಜಾವರ ಆಯ್ಕೆ
Update: 2019-07-31 22:42 IST
ಪುತ್ತೂರು: ಪುತ್ತೂರು, ಸುಳ್ಯ, ಬೆಳ್ತಂಗಡಿ, ಉಪ್ಪಿನಂಗಡಿ, ವಿಟ್ಲ, ಕಲ್ಲಡ್ಕಗಳನ್ನೊಳಗೊಂಡ ಪುತ್ತೂರು ವಲಯಕ್ಕೆ ಕಾರ್ಯಾಧ್ಯಕ್ಷರಾಗಿ ಇಬ್ರಾಹಿಮ್ ಅಜ್ಜಾವರ ಇವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಮಹಮ್ಮದ್ ಕುಂಬ್ರ, ಇಸ್ಹಾಕ್ ವಿಟ್ಲ ಮತ್ತು ಅಲ್ತಾಫ್ ಉಪ್ಪಿನಂಗಡಿ ಆಯ್ಕೆಯಾದರು. ಈ ಸಂದರ್ಭದಲ್ಲಿ ವಲಯ ಸಮಿತಿಯನ್ನೂ ರಚಿಸಲಾಯಿತು.
ಇಲ್ಲಿನ ಮಿನಾರ್ ಕಾಂಪ್ಲೆಕ್ಸ್ ನಲ್ಲಿ ನಡೆದ ಸದಸ್ಯರ ಸಭೆಯನ್ನುದ್ದೇಶಿಸಿ, ಪಕ್ಷದ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಮಾತನಾಡಿ, "ಪಕ್ಷದ ಚಟುವಟಿಕೆಗಳನ್ನು ವಿಸ್ತಾರಗೊಳಿಸಲು ಪುತ್ತೂರು ವಲಯ ಸಮಿತಿಯನ್ನು ರಚಿಸಲಾಗಿದೆ. ಇದರಿಂದ ಪಕ್ಷವು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುವ ನಿರೀಕ್ಷೆಯಿದೆ" ಎಂದರು.
ಜಿಲ್ಲೆಯವರೇ ಆದ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲ್ಯಾನ್ ಮತ್ತು ಜಿಲ್ಲಾ ನಾಯಕರು ಭಾಗವಹಿಸಿದ ಈ ಸಭೆಯ ನೇತೃತ್ವವನ್ನು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರ್ಫರಾಝ್ ಅಡ್ವಕೇಟ್ ವಹಿಸಿದ್ದರು.