×
Ad

'ಸಮಾನ ಕೆಲಸಕ್ಕೆ ಸಮಾನ ವೇತನ'

Update: 2019-08-01 18:13 IST

ಉಡುಪಿ, ಆ.1: ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂಬ ರಾಷ್ಟ್ರದ ಉಚ್ಛ ನ್ಯಾಯಾಲಯದ ತೀರ್ಪಿನಿಂದ ದೇಶದ ನೌಕರ ವರ್ಗದವರಿಗೆ ಸಂತೋಷವಾಗಿದೆ. ಇದು ಬಹಳ ಸಮಯದ ಬೇಡಿಕೆಯಾಗಿತ್ತು. ಯಾವ ರೀತಿಯಲ್ಲಿ ನೇಮಕಗೊಂಡರೂ ಸಮಾನ ಕೆಲಸಕ್ಕೆ ಸಮಾನ ಕನಿಷ್ಟ ವೇತನ ನೀಡೇಕೆಂದು ನ್ಯಾಯಾಲಯ ತೀರ್ಪು ನೀಡಿದೆ.

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂಬ ರಾಷ್ಟ್ರದ ಉಚ್ಛ ನ್ಯಾಯಾಲಯದ ತೀರ್ಪಿನಿಂದ ದೇಶದ ನೌಕರ ವರ್ಗದವರಿಗೆ ಸಂತೋಷವಾಗಿದೆ. ಇದು ಬಹಳ ಸಮಯದ ಬೇಡಿಕೆಯಾಗಿತ್ತು. ಯಾವ ರೀತಿಯಲ್ಲಿ ನೇಮಕಗೊಂಡರೂ ಸಮಾನ ಕೆಲಸಕ್ಕೆ ಸಮಾನ ಕನಿಷ್ಟ ವೇತನ ನೀಡಬೇಕೆಂದು ನ್ಯಾಯಾಲಯ ತೀರ್ಪು ನೀಡಿದೆ.

ಸಮಾನ ಕೆಲಸಕ್ಕೆ ಸಮಾನ ವೇತನ ನೀಡದಿರುವುದು ಮಾನವ ಘನತೆಯ ಮೂಲಕ್ಕೆ ದಕ್ಕೆ ತರುವಂತದ್ದಾಗಿದೆ. 1979ರ ಎ.10ರಂದು ಭಾರತ ಸಹಿ ಮಾಡಿದ ಅಂತಾರಾಷ್ಟೀಯ ಒಪ್ಪಂದದ ಉಲ್ಲಂಫನೆ ಎಂದಿರುತ್ತದೆ. ನ್ಯಾಯಾಲಯ, ಪಂಜಾಬ್ ಸರಕಾರ ಸಮಾನ ವೇತನ ನೀಡದಿರುವ ಬಗ್ಗೆ ಗುತ್ತಿಗೆ ನೌಕರರ ಮನವಿಯನ್ನು ಮನ್ನಿಸಿ ಪಂಜಾಬು ಮತ್ತು ಹರಿಯಾಣ ಉಚ್ಛನ್ಯಾಯಾಲಯದ ತೀರ್ಪು ಜಾರಿಗೊಳಿಸದಂತೆ ತಡೆ ನೀಡಿ ಸರಕಾರಕ್ಕೆ ನಿರ್ದೇಶನ ನೀಡಿರುವುದನ್ನು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಉಡುಪಿ ಜಿಲ್ಲಾ ಸಂಘದ ಕಾರ್ಯದರ್ಶಿ ಎಸ್. ಎಸ್. ತೋನ್ಸೆ ಸ್ವಾಗತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News