ಭಾರತಕ್ಕೆ ಅಕ್ರಮ ಪ್ರವೇಶ ಯತ್ನ: ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷರ ಬಂಧನ

Update: 2019-08-02 06:18 GMT
Photo: ANI

ಚೆನ್ನೈ, ಆ. 1: ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯಿಂದ ಮಾಲ್ಡೀವ್ಸ್‌ನ ಮಾಜಿ ಉಪಾಧ್ಯಕ್ಷ ಅಹ್ಮದ್ ಅದೀಬ್ ಅವರನ್ನು ಗುರುವಾರ ಬಂಧಿಸಲಾಗಿದೆ.

ತೂತುಕುಡಿಯ ಬಂದರು ಪ್ರಾಧಿಕಾರ ಅವರನ್ನು ಬಂಧಿಸಿದೆ ಎಂದು ‘ಮಾಲ್ಡೀವ್ಸ್ ಇಂಡಿಪೆಂಡೆಂಟ್’ ಪತ್ರಿಕೆ ವರದಿ ಮಾಡಿದೆ.

ಅದೀಬ್ ಅವರು ವಿರ್ಗೋ ಎಂದು ಕರೆಯಲಾಗುವ ಹಡಗಿನ ಸದಸ್ಯನಂತೆ ಸೋಗು ಹಾಕಿದ್ದರು ಎಂದು ಪತ್ರಿಕೆ ತಿಳಿಸಿದೆ.

 ‘ವರದಿಯ ನಿಖರತೆ ಬಗ್ಗೆ ಖಚಿತಪಡಿಸಿಕೊಳ್ಳಲು’ ಸರಕಾರ ಪ್ರಯತ್ನಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ. ಮಾಲ್ಡೀವ್ಸ್‌ನ ನ್ಯಾಯಾಲಯ ಹಲವು ದೋಷಗಳಿಂದ ಮುಕ್ತಗೊಳಿಸಿದ ಬಳಿಕ ಅದೀಬ್ ಭಾರತಕ್ಕೆ ಆಗಮಿಸಿದ್ದರು. ಆದರೆ, ಕೆಲವು ಪ್ರಕರಣಗಳ ತನಿಖೆ ನಡೆಯುತ್ತಿರುವುದರಿಂದ ಅವರ ಪಾಸ್‌ಪೋರ್ಟ್ ಅನ್ನು ತಡೆ ಹಿಡಿಯಲಾಗಿದೆ. 15 ದಿನಗಳ ನ್ಯಾಯಾಂಗ ನಿಂದನೆ ಶಿಕ್ಷೆ ಅನುಭವಿಸಿದ ಬಳಿಕ ಗೃಹಬ ಬಂಧನದಲ್ಲಿದ್ದ ಅವರನ್ನು ಎರಡು ವಾರಗಳ ಹಿಂದೆ ಮುಕ್ತಗೊಳಿಸಲಾಗಿತ್ತು ಎಂದು ಮಾಲ್ಡೀವ್ಸ್ ಇಂಡಿಪೆಂಡೆಂಟ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News