×
Ad

ದಾರಿದೀಪಗಳ ನಿರ್ವಹಣೆ: ಉಡುಪಿ ನಗರಸಭೆಯಲ್ಲಿ ಸಭೆ

Update: 2019-08-01 21:52 IST

ಉಡುಪಿ, ಆ.1:ನಗರಸಭಾ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ದೂರುಗಳು ಕೇಳಿ ಬರುತ್ತಿರುವ ದಾರಿದೀಪಗಳ ನಿರ್ವಹಣೆಯ ಕುರಿತಂತೆ ನಗರಸಭೆಯ ಅಧಿಕಾರಿಗಳು ಹಾಗೂ ಚುನಾಯಿತಿ ಜನಪ್ರತಿನಿಧಿಗಳೊಂದಿಗೆ ಶಾಸಕ ಕೆ. ರಘುಪತಿ ಭಟ್ ಗುರುವಾರ ಸಭೆ ನಡೆಸಿ ಚರ್ಚಿಸಿದರು.

ಕಳೆದ ಕೆಲವು ಸಮಯದಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ದಾರಿ ದೀಪಗಳ ನಿರ್ವಹಣೆ ಸರಿಯಾಗಿ ಆಗದಿರುವ ಬಗ್ಗೆ ಚರ್ಚಿಸಲಾಯಿತು. ಈ ಬಗ್ಗೆ ತುರ್ತಾಗಿ ದಾರಿದೀಪಗಳನ್ನು ದುರಸ್ಥಿಪಡಿಸಲು ಗುತ್ತಿಗೆದಾರರಿಗೆ ಸೂಚಿಸುವಂತೆ ಆಯುಕ್ತರಿಗೆ ಶಾಸಕರು ತಿಳಿಸಿದರು.

ಈಗಾಗಲೇ ಇರುವ ದಾರಿದೀಪಗಳು ದುರಸ್ಥಿ ಪಡಿಸದ ರೀತಿಯಲ್ಲಿ ಇದ್ದು ಹೊಸದಾಗಿ ಪ್ರಥಮವಾಗಿ 1000 ಎಲ್‌ಇಡಿ ದೀಪಗಳನ್ನು ಝಾಮ್ ವತಿಯಿಂದ ಖರೀದಿಸಿ ಅಳವಡಿಸಲು ಮತ್ತು ದಾರಿದೀಪ ನಿರ್ವಹಣೆಗೆ ತುರ್ತಾಗಿ ಟೆಂಡರ್ ಕೆಯಲು ಅಧಿಕಾರಿಗಳಿಗೆ ಸೂಚಿಸಲಾಯಿತು.

ಸಭೆಯಲ್ಲಿ ಪೌರಾಯುಕ್ತ ಆನಂದ್ ಕಲ್ಲೋಳಿಕರ, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಗಣೇಶ, ಇಂಜಿನಿಯರ್ ದುರ್ಗಾಪ್ರಸಾದ್, ವಿವಿಧ ಅಧಿಕಾರಿಗಳು ಮತ್ತು ನಗರಸಭೆಯ ಚುನಾಯಿತ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News