×
Ad

ಮಂಗಳೂರು ನಗರ ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷರಾಗಿ ಶೆಲ್ಡನ್ ಕ್ರಾಸ್ತಾ

Update: 2019-08-01 22:00 IST

ಮಂಗಳೂರು, ಆ.1: ಲಯನ್ಸ್ ಹಾಗೂ ರೋಟರ್ಯಾಕ್ಟ್ ಕ್ಲಬ್‌ಗಳು ಸಮಾಜದ ಆಗುಹೋಗು ಮತ್ತು ಅಗತ್ಯತೆಗಳಿಗೆ ಸದಾ ಸ್ಪಂದಿಸುವ, ನೊಂದವರ ಕಣ್ಣೀರು ಒರೆಸುವ ಎರಡು ಬಲಿಷ್ಟ ಬಾಹುಗಳಿದ್ದಂತೆ. ಆಯ್ಕೆಗೊಂಡ ಹೊಸ ಸಮಿತಿಯು ಈ ಆಶಯಗಳಿಗೆ ಸ್ಪಂದಿಸಲಿ ಎಂದು ಲಯನ್ಸ್ 317 ಡಿ ಜಿಲ್ಲಾ ಗವರ್ನರ್ ರೊನಾಲ್ಡ್ ಗೋಮ್ಸ್ ಹೇಳಿದರು.

ನಂತೂರಿನ ಈಡನ್ ಕ್ಲಬ್‌ನಲ್ಲಿ ಮಂಗಳವಾರ ನಡೆದ ಮಂಗಳೂರು ನಗರ ರೋಟರ್ಯಾಕ್ಟ್ ಕ್ಲಬ್‌ನ 2019-20ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಯುವ ಉದ್ಯಮಿ ಶೆಲ್ಡನ್ ಕ್ರಾಸ್ತಾ, ಕಾರ್ಯದರ್ಶಿಯಾಗಿ ರಕ್ಷತಾ ಅಧಿಕಾರ ಸ್ವೀಕರಿಸಿದರು. ರೋಟರಿ ಕ್ಲಬ್ ಮಂಗಳೂರು ಕೇಂದ್ರದ ಅಧ್ಯಕ್ಷ ಡಾ. ಜಯಪ್ರಕಾಶ್ ಪೂಂಜಾ ಪದಗ್ರಹಣ ನೆರವೇರಿಸಿದರು. ನಿರ್ಗಮಿತ ಅಧ್ಯಕ್ಷ ಡಾ. ಗಣೇಶ್ ಜಿಟಿ ಅವರನ್ನು ಕಳೆದ ಸಾಲಿನಲ್ಲಿ ಮಾಡಿದ ಸಮಾಜಮುಖಿ ಸೇವೆಗಾಗಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ರೋಟರಿ ಮುಖಂಡರಾದ ಕೇಶವ ಆರ್. ಹಾಗೂ ಡಾ. ದೇವದಾಸ ರೈ ಉಪಸ್ಥಿತರಿದ್ದರು. 15 ಮಂದಿ ನೂತನ ಸದಸ್ಯರನ್ನು ಬರಮಾಡಿಕೊಳ್ಳಲಾಯಿತು. ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News