ಶಾಹೀನ್ ಸ್ಪೋಟ್ಸ್ ಸೆಂಟರ್ ಸದಸ್ಯರಿಂದ ಮಾರಿ ಭಕ್ತರಿಗೆ ತಂಪು ಪಾನೀಯ ವಿತರಣೆ
Update: 2019-08-01 22:06 IST
ಭಟ್ಕಳ: ತಾಲೂಕಿನ ಪ್ರಸಿದ್ಧ ಮಾರಿ ಜಾತ್ರೆ ಮಾರಿ ಮೂರ್ತಿಯನ್ನು ಜಾಲಿಕೋಡಿ ಸಮುದ್ರದಲ್ಲಿ ವಿಸರ್ಜಿಸುವುದರ ಮೂಲಕ ಸಂಪನ್ನಗೊಂಡಿತು.
ಮಾರಿ ಮೂರ್ತಿಯನ್ನು ವಿಸರ್ಜನಾ ಸಮಾರಂಭದಲ್ಲಿ ತಾಲೂಕಿನ ಸಾವಿರಾರು ಭಕ್ತರು ಭಾಗವಹಿಸಿದ್ದು ಈ ಸಂದರ್ಭದಲ್ಲಿ ಮಗ್ದೂಮ್ ಕಾಲನಿಯ ಶಾಹೀನ್ ಸ್ಪೋಟ್ಸ್ ಸೆಂಟರ್ ಸದಸ್ಯರು ತಂಪು ಪಾನೀಯ ವಿತರಿಸುವುದರ ಮೂಲಕ ಭಕ್ತರ ಪ್ರಶಂಸೆಗೆ ಪಾತ್ರರಾದರು.
ಶಾಹೀನ್ ಸ್ಪೋಟ್ಸ್ ಸೆಂಟರ್ ಸದಸ್ಯರಾದ ಸಮಿಯುಲ್ಲಾಹ್, ಪುರಸಭೆ ಸದಸ್ಯ ಇಸ್ಮಾಯಿಲ್ ಇಮ್ಶಾದ್, ಮುಖ್ತಾರ್ ಮುಖ್ತೆಸರ್, ಇಸ್ರಾರ್ ಜಂಶೇರ್, ಇಮ್ರಾನ್ ಮುಖ್ತೆಸರ್, ಸಮಾಜ ಸೇವಕ ನಝೀರ್ ಕಾಶಿಮಜಿ ಮತ್ತಿತರರು ಉಪಸ್ಥಿತರಿದ್ದರು.