ಹೊಸದಿಲ್ಲಿಯಲ್ಲಿ ಜೋರ್ ಬಾಗ್ ನಿವಾಸ ತೆರವುಗೊಳಿಸುವಂತೆ

Update: 2019-08-01 17:06 GMT

ಹೊಸದಿಲ್ಲಿ, ಆ.1: ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ ದಿಲ್ಲಿಯ ಜೋರ್‌ಬಾಗ್‌ನಲ್ಲಿರುವ ನಿವಾಸವನ್ನು ತೆರವುಗೊಳಿಸುವಂತೆ ಕೇಂದ್ರ ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ಜಾರಿ ನಿರ್ದೇಶನಾಲಯ ಬುಧವಾರ ನಿರ್ದೇಶಿಸಿದೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿ ನ್ಯಾಯಾಧೀಶರ ಪ್ರಾಧಿಕಾರ ನೀಡಿರುವ ತೆರವು ನೋಟಿಸನ್ನು ಕಾರ್ತಿ ಅವರಿಗೆ ಬುಧವಾರ ಸಂಜೆ ನೀಡಲಾಗಿದ್ದು, ಆಸ್ತಿ ವಶಕ್ಕೆ ತೆಗೆದುಕೊಂಡಿರುವುದನ್ನು ಅದರಲ್ಲಿ ಹೇಳಲಾಗಿದೆ.

ದಿಲ್ಲಿಯ ಜೋರ್‌ಬಾಗ್ 115 ಎ ಬ್ಲಾಕ್ 172ರಲ್ಲಿರುವ ಸ್ಥಿರಾಸ್ಥಿಯನ್ನು ಕಳೆದ ವರ್ಷ ಅಕ್ಟೋಬರ್ 10ರಂದು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿತ್ತು.

ನೋಟಿಸ್ ಸ್ವೀಕರಿಸಿದ 10 ದಿನದ ಒಳಗೆ ಸೊತ್ತನ್ನು ತಮ್ಮ ವಶದಿಂದ ಹಸ್ತಾಂತರಿಸುವಂತೆ ಕಾರ್ತಿ ಚಿದಂಬರಂಗೆ ಜಾರಿ ನಿರ್ದೇಶನಾಲಯ ನೋಟಿಸು ಜಾರಿ ಮಾಡಿದೆ. ಈ ಸೊತ್ತು ಕಾರ್ತಿ ಚಿದಂಬರಂ ಹಾಗೂ ಅವರ ತಾಯಿ ನಳಿನಿ ಅವರ ಜಂಟಿ ಮಾಲಿಕತ್ವದಲ್ಲಿ ಇದೆ.

► ಕಾನೂನಿನ ಉಲ್ಲಂಘನೆ

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿ ದಿಲ್ಲಿಯ ಜೋರ್‌ಬಾಗ್ ನಿವಾಸ ತೆರವುಗೊಳಿಸುವಂತೆ ಜಾರಿ ನಿರ್ದೇಶನಾಲಯ ನೀಡಿದ ನೋಟಿಸನ್ನು ಕಾರ್ತಿ ಚಿದಂಬರಂ ನ್ಯಾಯಾಧೀಶರ ಪ್ರಾಧಿಕಾರದಲ್ಲಿ ಪ್ರಶ್ನಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಮನವಿ ಸಂಬಂಧಿತ ಪ್ರಾಧಿಕಾರದ ಮುಂದೆ ಬಾಕಿ ಇದೆ. ಆದುದರಿಂದ ಜಾರಿ ನಿರ್ದೇಶನಾಲಯದ ನೋಟಿಸು ಕಾನೂನಿನ ಉಲ್ಲಂಘನೆ ಎಂದು ಕಾರ್ತಿ ಚಿದಂಬರಂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News