×
Ad

ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಫಲ್ಗುಣಿ ನದಿ ತೀರದಲ್ಲಿ ಪತ್ತೆ

Update: 2019-08-01 22:39 IST

ಮಂಗಳೂರು, ಆ.1: ನಾಪತ್ತೆಯಾಗಿದ್ದ ಪುತ್ತೂರು ಬಲ್ನಾಡು ಗ್ರಾಮದ ಉಜ್ರುಪಾದೆಯ ಸುದರ್ಶನ ನಾಯ್ಕಾ (22) ಅವರು ಶವವಾಗಿ ಮಂಗಳೂರಿನ ದಂಬೇಲ್‌ನಲ್ಲಿ ಫಲ್ಗುಣಿ ನದಿ ತೀರದಲ್ಲಿ ಪತ್ತೆಯಾಗಿದೆ.

ಗುರುವಾರ ಬೆಳಗ್ಗೆ ದಂಬೇಲ್‌ನಲ್ಲಿ ನದಿ ನೀರಿನಲ್ಲಿ ಶವವೊಂದು ತೇಲುತ್ತಿರುವ ಬಗ್ಗೆ ಸಾರ್ವಜನಿಕರು ಉರ್ವ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ಜರಗಿಸಿದರು.

ಸುದರ್ಶನ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದ್ದು, ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಸುದರ್ಶನ್ ಅವರು ಪಣಂಬೂರಿನ ಎನ್‌ಎಂಪಿಟಿ ಕ್ಯಾಂಟೀನಿನಲ್ಲಿ ಕೆಲಸ ಮಾಡುತ್ತಿದ್ದು, ವಾರಕ್ಕೊಮ್ಮೆ ಊರಿಗೆ (ಪುತ್ತೂರು) ಹೋಗಿ ಬರುತ್ತಿದ್ದರು. ಜು.28ರಂದು ಮನೆಗೆ ಹೋಗಿದ್ದ ಅವರು ಜು.30ರಂದು ಮನೆಯಿಂದ ಹೊರಟಿದ್ದರು. ಆದರೆ ಕ್ಯಾಂಟೀನಿಗೆ ಹೋಗದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಅಣ್ಣ ಸುಮಂತ್ ನಾಯ್ಕೆ ಪುತ್ತೂರು ಗ್ರಾಮಾಂತರ (ಸಂಪ್ಯ) ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News