×
Ad

ಮಂಗಳೂರು: ಹಾಡಹಗಲೇ ಮನೆಗೆ ನುಗ್ಗಿ ಕಳವು

Update: 2019-08-01 22:40 IST

ಮಂಗಳೂರು, ಆ.1: ನಗರದ ಯೆಯ್ಯಾಡಿ ಸಮೀಪ ಮನೆಯೊಂದರ ಬಾಗಿಲು ಮುರಿದು 50 ಸಾವಿರ ರೂ. ಕಳವು ಮಾಡಿದ ಘಟನೆ ಗುರುವಾರ ಹಾಡಹಗಲೇ ನಡೆದಿದೆ.

ಮನೆಯವರು ಬೆಳಗ್ಗೆ ಕೆಲಸಕ್ಕೆ ಮನೆ ಬಾಗಿಲು ಹಾಕಿ ತೆರಳಿದ್ದರು. ಈ ಬಗ್ಗೆ ಮಾಹಿತಿ ಇದ್ದ ಕಳ್ಳರು ಮನೆಯ ಎದುರು ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ. ಬಳಿಕ ಮನೆಯಲ್ಲಿ ಜಾಲಾಡಿ ಬ್ಯಾಗ್‌ವೊಂದರಲ್ಲಿದ್ದ 50ಸಾವಿರ ರೂ. ನಗದು ಕಳವು ಮಾಡಿ ಪರಾರಿಯಾಗಿದ್ದಾರೆ. ಮನೆಯವರು ಸಂಜೆ ಮನೆಗೆ ಬರುವ ವೇಳೆ ಪ್ರಕರಣ ಬಯಲಿಗೆ ಬಂದಿದೆ.

ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News