×
Ad

​ಸರಗಳ್ಳತನ: ಆರೋಪಿಗಳ ಬಂಧನ

Update: 2019-08-01 23:08 IST

ಮೂಡುಬಿದಿರೆ: ಮೂರು ಕಡೆಗಳಲ್ಲಿ ಸರಗಳ್ಳತನಕ್ಕೆ ಯತ್ನ ಮತ್ತು ಕಳ್ಳತನದ ಅರೋಪದಡಿ ಇಬ್ಬರನ್ನು ಬಂಧಿಸಿರುವ ಪೊಲೀಸರು  ಚಿನ್ನಾಭರಣ ಸೇರಿದಂತೆ ಎರಡು ಬೈಕ್ ಸಹಿತ ಇತರ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂಡುಮಾರ್ನಾಡಿನ ದಿನೇಶ್ ಹಾಗೂ ಕೃತ್ಯಕ್ಕೆ ಸಹಕರಿಸಿದ ಯೋಗೀಶ್ ಆಚಾರ್ಯ ಅವರನ್ನು ಪೋಲೀಸರು ಬಂಧಿಸಿದ್ದಾರೆ. ಅವರಿಂದ ಎರಡು ಬೈಕ್, 3 ಮೊಬೈಲ್ ಫೋನ್‍ಗಳು, 2 ಚಿನ್ನದ ಸರಗಳು, ಮತ್ತು ಒಂದು ಜತೆ ಬೆಂಡೋಲೆ ಸೇರಿದಂತೆ ಒಟ್ಟು 1.73 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಮುರಮೇಲು, ಆಲಂಗಾರ್‍ನಲ್ಲಿ ಸರಗಳ್ಳತನ ಹಾಗೂ ವಾಲ್ಪಾಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದರು ಎನ್ನಲಾಗಿದೆ. 

ಪೋಲೀಸ್ ಆಯುಕ್ತರ ನಿರ್ದೇಶನದಂತೆ ಮೂಡುಬಿದಿರೆ ಪ್ರಭಾರ ನಿರೀಕ್ಷಕ ಅನಂತಪದ್ಮನಾಭ, ಉಪನಿರೀಕ್ಷರುಗಳಾದ ದೇಜಪ್ಪ, ಕೃಷ್ಣ ಸಹಿತ ಸಿಬ್ಬಂದಿ ಆರೋಪಿಗಳ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News