ಸುಳ್ಯ: ಅನ್ಸಾರಿಯಾ ಮಹಿಳಾ ಶರೀಅತ್ ಕಾಲೇಜು ಉದ್ಘಾಟನೆ

Update: 2019-08-02 12:06 GMT

ಸುಳ್ಯ: ಜಟ್ಟಿಪಳ್ಳ, ನಾವೂರು ರಸ್ತೆ ಬೋರುಗುಡ್ಡೆಯಲ್ಲಿ ಸುಮಾರು 25 ವರ್ಷಗಳಿಂದ ಧಾರ್ಮಿಕ, ಶೈಕ್ಷ ಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗಮನಾರ್ಹ ಸೇವೆಯನ್ನು ಸಲ್ಲಿಸುತ್ತಿರುವ ಅನ್ಸಾರಿಯಾ ಅನಾಥ ನಿರ್ಗತಿಕ ಮಂದಿರದ ಅಧೀನದಲ್ಲಿ ಅನ್ಸಾರಿಯಾ ಮಹಿಳಾ ಶರೀಅತ್ ಕಾಲೇಜು ಕಟ್ಟಡ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು.

ಕುಂಬ್ರ ವಿಮೆನ್ಸ್ ಕಾಲೇಜಿನ ಪ್ರಾಂಶುಪಾಲರಾದ ಮುಹಮ್ಮದ್ ಸಅದಿ ವಳವೂರ್  ಕಟ್ಟಡ ಉದ್ಘಾಟನೆ ಮಾಡಿದರು.

ಅನ್ಸಾರಿಯಾ ಅನಾಥ ನಿರ್ಗತಿಕ ಮಕ್ಕಳ ಕೇಂದ್ರ ಸುಳ್ಯ ಇದರ ಅಧ್ಯಕ್ಷ ಹಾಜಿ ಕೆ ಎಂ ಅಬ್ದುಲ್‌ ಮಜೀದ್  ಅಧ್ಯಕ್ಷತೆ ವಹಿಸಿದ್ದರು. ಅನ್ಸಾರಿಯಾ ವಿಮೆನ್ಸ್ ಕಾಲೇಜು ಸುಳ್ಯ ಇದರ  ಪ್ರಾಂಶುಪಾಲ ಉಮರ್ ಮುಸ್ಲಿಯಾರ್ ಮರ್ದಾಳ ಸ್ವಾಗತಿಸಿದರು. ಕೇಂದ್ರ ಜುಮಾ ಮಸೀದಿ ಖತೀಬ್ ಅಶ್ರಫ್ ಕಾಮಿಲ್ ಸಖಾಫಿ ವಯನಾಡು ಪ್ರಾಸ್ತಾವಿಕ ಭಾಷಣ ಮಾಡಿದರು. ಮುಹಮ್ಮದ್ ಸಅದಿ ವಳವೂರ್ ತರಗತಿ ನಡೆಸಿದರು.

ಶರೀಅತ್ ಕಾಲೇಜಿನ ಅವಶ್ಯಕತೆಯ ಕುರಿತು ಉಪ ಪ್ರಾಂಶುಪಾಲರಾದ ಶೌಕತ್ ಅಲಿ ಅಮಾನಿ ಮಾತನಾಡಿದರು. ಈ ಸಂದರ್ಭ ಶರೀಅತ್ ಕಾಲೇಜಿಗೆ ಕಟ್ಟಡವನ್ನು ದಾನವಾಗಿ ನೀಡಿದ ಹಾಜಿ ಬಿಕೆ ಅಬ್ದುಲ್ ಖಾದರ್ ಕಲ್ಲಪಳ್ಳಿ, ಹಾಜಿ ಕೆ ಎಚ್ ಅಬ್ದುಲ್ ಶುಕೂರ್ ಅವರನ್ನು ಸನ್ಮಾನಿಸಲಾಯಿತು.

ಅನ್ಸಾರಿಯಾ ದಅ್ ವ ವಿದ್ಯಾರ್ಥಿಗಳು ಹೊರತಂದ ಕೈ ಬರಹ ಮಾಸಿಕವನ್ನು ಅಶ್ರಫ್ ಕಾಮಿಲ್ ಸಖಾಫಿ ಹಾಜಿ ಕೆ ಎ ಅಬ್ಬಾಸ್ ಕಟ್ಟೆಕಾರ್ ಅವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಹಾಜಿ ಐ ಇಸ್ಮಾಯಿಲ್, ಹಾಜಿ ಕೆ ಬಿ ಮೊಹಮ್ಮದ್, ಹಾಜಿ ಆದಂ ಕುಂಞಿ ಕಮ್ಮಾಡಿ, ಬೋರುಗುಡ್ಡೆ ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ ಎಸ್, ಹಾಜಿ ಅಬ್ದುಲ್ ಸಮದ್ ಮೊಗರ್ಪಣೆ, ಹಾಜಿ ಅಬ್ದುಲ್ ಖಾದರ್ ಪಟೇಲ್, ಸಂಸ್ಥೆಯ ಪ್ರ. ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ, ಹಾಜಿ ಬಿ ಬಾಬ ಎಲಿಮಲೆ, ಹಾಜಿ ಕೆ ಹಸನ್, ಕೆ ಎ ಅಬ್ದುಲ್ ಕಲಾಂ ಬೀಜಕೊಚ್ಚಿ, ಸಂಸ್ಥೆಯ ಜನರಲ್ ಮ್ಯಾನೇಜರ್ ಉವೈಸ್ ಬೀಟಿಗೆ, ಯಾಕೂಬ್ ಮುಸ್ಲಿಯಾರ್, ನೌಶಾದ್ ಮದನಿ, ಎಸ್ ಜೆ ಎಂ ಸುಳ್ಯ ರೇಂಜ್ ಕಾರ್ಯದರ್ಶಿ ನಿಸಾರ್ ಸಖಾಫಿ, ಸಿದ್ದೀಕ್ ಮಾಸ್ಟರ್, ಕಮಾಲ್ ಮಾಸ್ಟರ್ ಹಾಗೂ ಇತರರು ಉಪಸ್ಥಿತರಿದ್ದರು.

ಅಬ್ದುಲ್ ಹಮೀದ್ ಬೀಜಕೊಚ್ಚಿ ಕಾರ್ಯಕ್ರಮ ನಿರೂಪಿಸಿ, ಕೆ ಬಿ ಅಬ್ದುಲ್ ಮಜೀದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News