ಗಾಂಜಾ ಸೇವನೆ: ಮೂವರು ವಶಕ್ಕೆ
Update: 2019-08-02 22:00 IST
ಉಡುಪಿ, ಆ.2: ಗಾಂಜಾ ಸೇವನೆಗೆ ಸಂಬಂಧಿಸಿ ಆ.1ರಂದು ವಿವಿಧ ಠಾಣಾ ವ್ಯಾಪ್ತಿಯಲ್ಲಿ ಮೂರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ ಡಿಸಿಐಬಿ ಪೊಲೀಸರು ಕಾಪು ಠಾಣಾ ವ್ಯಾಪ್ತಿಯ ಉದ್ಯಾವರ ಬೊಳ್ಜೆ ಕ್ರಾಸ್ ಬಳಿ ಮೂಡಬಿದ್ರೆಯ ಪಾಲಡ್ಕ ನಿವಾಸಿ ನಿಕೇಶ್(23), ಉಡುಪಿ ನಗರ ಠಾಣಾ ವ್ಯಾಪ್ತಿಯ ಬಡಗುಬೆಟ್ಟು ಗ್ರಾಮದ ಕೊಳಂಬೆ ಬಳಿ ಸ್ಥಳೀಯ ನಿವಾಸಿ ಆಲೈನ್ ರೋಶನ್ ಕೈರನ್ನ(30), ಉಡುಪಿ ನಗರ ಪೊಲೀಸರು ಅಂಬಲಪಾಡಿ ಗಣೇಶ ಕಟ್ಟೆ ಬಳಿ ಇಂದಿರಾನಗರದ ಸ್ಟ್ಯಾನ್ಲಿ ಸಂದೀಪ್(28) ಎಂಬವರನ್ನು ವಶ್ಕೆ ಪಡೆದುಕೊಂಡಿದ್ದಾರೆ.