×
Ad

ಕರಾವಳಿ ಕಾವಲು ಪಡೆ ಎಸ್ಪಿಯಾಗಿ ಚೇತನ್ ನೇಮಕ

Update: 2019-08-02 22:01 IST

ಉಡುಪಿ, ಆ.2: ಉಡುಪಿ ಜಿಲ್ಲಾ ಕರಾವಳಿ ಕಾವಲು ಪೊಲೀಸ್ ಪಡೆಯ ಪೊಲೀಸ್ ಅಧೀಕ್ಷಕರನ್ನಾಗಿ ಆರ್.ಚೇತನ್ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಈ ಹಿಂದಿನ ಅಧೀಕ್ಷಕರ ವರ್ಗಾವಣೆ ಬಳಿಕ ಕರಾವಳಿ ಕಾವಲು ಅಧೀಕ್ಷಕರ ಹುದ್ದೆಗೆ ಸರಕಾರ ನೇಮಕ ಮಾಡಿರಲಿಲ್ಲ. ಇದೀಗ ಬಳ್ಳಾರಿ, ದಾವಣಗೆರೆಯಲ್ಲಿ ಎಸ್‌ಪಿ ಆಗಿ ಕಾರ್ಯನಿರ್ವಹಿಸಿದ್ದ 2010ರ ಐಪಿಎಸ್ ಬ್ಯಾಚ್‌ನ ಅಧಿಕಾರಿ ಚೇತನ್ ಅವರನ್ನು ಸರಕಾರ ಈ ಹುದ್ದೆಗೆ ನಿಯೋಜಿಸಿದೆ.

ದಾವಣಗೆರೆಯಿಂದ ವರ್ಗಾವಣೆಗೊಂಡಿದ್ದ ಇವರಿಗೆ ಈವರೆಗೆ ಯಾವುದೇ ಹುದ್ದೆ ತೋರಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News