×
Ad

ಗಾಂಜಾ ಪ್ರಕರಣ: ಇಬ್ಬರ ಬಂಧನ, 105 ಗ್ರಾಂ ಗಾಂಜಾ ವಶ

Update: 2019-08-02 22:16 IST

ಮಂಗಳೂರು, ಆ.2: ಅಬಕಾರಿ ಇಲಾಖೆಯ ಅಧಿಕಾರಿಗಳು ಮಂಗಳೂರು ನಗರದಲ್ಲಿ ಗಾಂಜಾ ಮಾರಾಟ ಮತ್ತು ಸೇವನೆ ವಿರುದ್ಧ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಇಬ್ಬರನ್ನು ಬಂಧಿಸಿ 105 ಗ್ರಾಂ ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ.

ಬೆಂದೂರ್‌ವೆಲ್ ನಿವಾಸಿ ಯಜ್ಞೇಶ್ ಶೆಟ್ಟಿ(23) ಮತ್ತು ಕೇರಳದ ಕಣ್ಣೂರು ನಿವಾಸಿ ಮಂಗಳೂರಿನ ಕಾಲೇಜು ಒಂದರ ವಿದ್ಯಾರ್ಥಿ ಆಲ್ವಿನ್ ಕುರಿಯನ್ (22) ಬಂಧಿತ ಆರೋಪಿಗಳು.

ಯಜ್ಞೇಶ್ ಶೆಟ್ಟಿಯನ್ನು ಬುಧವಾರ ಸಂಜೆ ನಗರದ ಬಿಜೈ ನ್ಯೂ ರೋಡ್‌ನಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 100 ಗ್ರಾಂ ಗಾಂಜಾ ವಶಪಡಿಸಿಕೊಂಡು ಬಂಧಿಸಿದರು.

ಆಲ್ವಿನ್ ಕುರಿಯನ್ ಗುರುವಾರ ಸಂಜೆ ನಗರದ ಓಲ್ಡ್ ಕೆಂಟ್ ರೋಡ್‌ನಲ್ಲಿ ಗಾಂಜಾ ಸೇವನೆಯ ಅಮಲಿನಲ್ಲಿದ್ದಾಗ ಅಬಕಾರಿ ಇಲಾಖೆಯ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ಆತನ ಬಳಿ 5 ಗ್ರಾಂ ಗಾಂಜಾ ಪತ್ತೆಯಾಗಿದೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.

ಅಬಕಾರಿ ಇಲಾಖೆಯ ಮಂಗಳೂರು ಉಪ ವಿಭಾಗ 1ರ ಇನ್‌ಸ್ಪೆಕ್ಟರ್ ಸುನಿತಾ, ಸಬ್ ಇನ್‌ಸ್ಪೆಕ್ಟರ್ ಪ್ರತಿಭಾ, ಸಿಬಂದಿ ಸಂತೋಷ್ ಕುಮಾರ್, ಉಮೇಶ್ ಮತ್ತು ಸುನಿಲ್ ಈ ಕಾರ್ಯಾಚರಣೆಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News