×
Ad

ನೀರಿಗೆ ಇಳಿದ ವ್ಯಕ್ತಿ ನಾಪತ್ತೆ

Update: 2019-08-02 22:18 IST

ಮಂಗಳೂರು, ಆ.2: ದೋಣಿ ದುರಸ್ತಿ ಮಾಡಲು ನೀರಿಗೆ ಇಳಿದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಮಿಳುನಾಡು ಮೂಲದ ಸೆಲ್ವಂ(42) ನಾಪತ್ತೆಯಾದವರು.

ಬೋಟ್‌ನಲ್ಲಿ ತಾಂತ್ರಿಕ ದೋಷಗಳಿತ್ತು. ಈ ಕಾರಣದಿಂದ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಬೋಟ್ ದುರಸ್ತಿ ಮಾಡಲು ಸೆಲ್ವಂ ನೀರಿಗೆ ಇಳಿದವರು ಮೇಲೆ ಬಾರದೆ ನಾಪತ್ತೆಯಾಗಿದ್ದಾರೆ.

ಶೋಧ ಕಾರ್ಯ: ಸೆಲ್ವಂ ನಾಪತ್ತೆಯಾದ ವಿಚಾರ ತಿಳಿಯುತ್ತಿದ್ದಂತೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ತಣ್ಣೀರುಬಾವಿ ಮುಳುಗುತಜ್ಞರ ತಂಡ ರಾತ್ರಿಯವರೆಗೂ ಶೋಧ ಕಾರ್ಯಾಚರಣೆ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ.

ಚಹರೆ: 5.5ಅಡಿ, ಎಣ್ಣೆ ಕಪ್ಪು ಮೈಬಣ್ಣ, ನೇರ ಕೂದಲು, ಸಾಧಾರಣ ಶರೀರ, ತಮಿಳು ಭಾಷೆ ಮಾತನಾಡುತ್ತಿದ್ದು, ಕಪ್ಪು ಬಣ್ಣದ ಚಡ್ಡಿ ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News