ಮರಳು ಅಕ್ರಮ ಸಾಗಾಟ ಆರೋಪ: 10 ಟನ್ ಮರಳು ವಶ
ಮಂಗಳೂರು, ಆ.2: ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ 10 ಟನ್ ಮರಳನ್ನು ಕದ್ರಿ ಪೊಲೀಸರು ಸ್ವಾಧೀನಪಡಿಸಿಕೊಂಡು, ಚಾಲಕನನ್ನು ಪದವು ಎಂಬಲ್ಲಿ ಬಂಧಿಸಿದ್ದಾರೆ.
ಪಡೀಲ್ ಕಣ್ಣೂರು ನಿವಾಸಿ ಮುಹಮ್ಮದ್ ನವಾಝ್ (38) ಬಂಧಿತ ಆರೋಪಿ.
ಪರವಾನಿಗೆ ರಹಿತ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕದ್ರಿ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಯು ಮಂಗಳೂರು ನಗರದ ಅಡ್ಯಾರ್‌ನಿಂದ ಉಡುಪಿ ಕಡೆಗೆ ಲಾರಿಯಲ್ಲಿ ಸುಮಾರು 10 ಟನ್ ಮರಳು ಸಾಗಾಟ ಮಾಡುತ್ತಿದ್ದ. ಟಿಪ್ಪರ್ ಲಾರಿ ಸಹಿತ ಮರಳನ್ನು ವಶಕ್ಕೆ ಪಡೆಯಲಾಗಿದೆ.
ಸ್ವಾಧೀನಪಡಿಸಿಕೊಳ್ಳಲಾದ 10 ಟನ್ ಮರಳು ಹಾಗೂ ಲಾರಿ ಮೌಲ್ಯ 5.07 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತು ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಮಂಗಳೂರು ಪೂರ್ವ ಠಾಣಾ ಇನ್‌ಸ್ಪೆಕ್ಟರ್ ಶಾಂತರಾಮ್, ಪಿಎಸ್ಸೈ ಮಾರುತಿ, ಎಎಸ್ಸೈಗಳಾದ ಶಶಿಧರ್ ಶೆಟ್ಟಿ, ಸಂತೋಷ್ ಪಡೀಲ್, ಹೆಡ್‌ಕಾನ್‌ಸ್ಟೇಬಲ್‌ಗಳಾದ ಜಯಾನಂದ, ಉಮೇಶ್, ಪ್ರಶಾಂತ್ ಶೆಟ್ಟಿ, ಗಿರೀಶ್ ಜೋಗಿ, ಕಾನ್‌ಸ್ಟೇಬಲ್ ಮೋಹನ್ ಸಾಲ್ಯಾನ್ ಪಾಲ್ಗೊಂಡಿದ್ದರು.