ಯೋಗ ಸ್ಪರ್ಧೆ: ಆಳ್ವಾಸ್‍ನ ಶ್ವೇತಾ ಭಟ್ ರಾಷ್ಟ್ರಮಟ್ಟಕ್ಕೆ ಆಯ್ಕೆ
Update: 2019-08-02 22:48 IST
ಮೂಡುಬಿದಿರೆ: ಗದಗದ ಡಿಜಿಎಂ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮಟ್ಟದ ಯೋಗಾಸನ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಆಳ್ವಾಸ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ಶ್ವೇತಾ ಭಟ್ ತೃತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮಹಿಳಾ ವಿಭಾಗದಲ್ಲಿ ಆಳ್ವಾಸ್ ತಂಡವು ರನ್ನರ್‍ಅಪ್ ಹಾಗೂ ಪುರುಷರ ತಂಡವು ಸೆಕೆಂಡ್ ರನ್ನರ್‍ಅಪ್ ಪ್ರಶಸ್ತಿ ಪಡೆದಿವೆ. ಸ್ಪರ್ಧೆಯಲ್ಲಿ ಆಳ್ವಾಸ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್‍ನ ಒಟ್ಟು 16 ಮಂದಿ ಭಾಗವಹಿಸಿದ್ದರು.