ಉಡುಪಿ: ಹಶಿಮಿ ಮಸೀದಿಯ ವಾರ್ಷಿಕ ಸಭೆ; ಪದಾಧಿಕಾರಿಗಳ ಆಯ್ಕೆ
Update: 2019-08-02 23:03 IST
ಉಡುಪಿ: ಇಲ್ಲಿನ ನಾಯ್ಕೆರೆ, ಹಶಿಮಿ ಮಸೀದಿಯ ವಾರ್ಷಿಕ ಸಭೆ ಇತ್ತೀಚೆಗೆ ನಡೆಯಿತು. ಈ ಸಂದರ್ಭ ಹಶಿಮಿ ಮಸೀದಿಯ ಅಧ್ಯಕ್ಷರಾಗಿ ಮುಹಮ್ಮದ್ ಜಕ್ರಿಯಾ ಅಸ್ಸಾದಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಹಾಜಿ ಗುಲಾಮ್ ರವೂಫ್, ಕಾರ್ಯದರ್ಶಿಯಾಗಿ ಫಿರೋಝ್ ಮನ್ನಾ, ಖಜಾಂಚಿಯಾಗಿ ತಜಮ್ಮುಲ್ ಮನ್ನಾ, ಜಂಟಿ ಖಜಾಂಚಿಯಾಗಿ ಮೆಹಬೂಬ್ ಬಾಷಾ, ಸಾರ್ವಜನಿಕ ಸಂಪರ್ಕ, ಮಾಧ್ಯಮ ಮತ್ತು ಮಾನವ ಸಂಪನ್ಮೂಲ ಸಂಯೋಜಕರಾಗಿ ಎಂ. ಇಕ್ಬಾಲ್ ಮನ್ನಾ, ಕಾನೂನು ಮತ್ತು ಅಧಿಕೃತ ವರದಿಗಾರರಾಗಿ ಶೌಕತುಲ್ಲಾ ಅಸ್ಸಾದಿ, ವಿಶೇಷ ಅಗತ್ಯಗಳಿಗಾಗಿ ಹಾಸನ ಅಜ್ಜರ್ಕಾದ್, ರಿಪೇರಿ ಮತ್ತು ನಿರ್ವಹಣೆಗಾಗಿ ಅಲ್ತಾಫ್ ಪಾಲೌಕರ್ ಆಯ್ಕೆಯಾದರು.
ಅಜ್ಮಲ್ ಅಸ್ಸಾದಿ ಸ್ವಾಗತಿಸಿದರು. ಹಫೀಜ್ ಅಬು ಸುಫಿಯಾನ್ ಅಧಿವೇಶನವನ್ನು ಪ್ರಾರಂಭಿಸಿದರು. ಜಕ್ರಿಯಾ ಅಸ್ಸಾದಿ ಹಣಕಾಸು ವರದಿಯನ್ನು ಮಂಡಿಸಿದರು. ಮನ್ಸೂರ್ ಮನ್ನಾ ವಾರ್ಷಿಕ ವರದಿ ಓದಿದರು. ರಿಯಾಝ್ ಅಹ್ಮದ್ ಚುನಾವಣಾ ವೀಕ್ಷಕರಾಗಿ ಹಾಜರಿದ್ದರು. ಹಸನ್ ಅಜ್ಜರ್ಕಾದ್ ವಂದಿಸಿದರು.