ಆ. 9ರಂದು ಹಜ್ ಯಾತ್ರೆ ಆರಂಭ

Update: 2019-08-02 17:57 GMT

ರಿಯಾದ್, ಆ. 2: ದುಲ್-ಹಜ್ ತಿಂಗಳ ಚಂದ್ರದರ್ಶನವಾಗಿದೆ ಎಂದು ಸೌದಿ ಅರೇಬಿಯದ ಸುಪ್ರೀಮ್ ಕೋರ್ಟ್ ಗುರುವಾರ ಖಚಿತಪಡಿಸಿದೆ.

ಹಾಗಾಗಿ, ಹಜ್ ಯಾತ್ರೆಯು ಆಗಸ್ಟ್ 9, ಶುಕ್ರವಾರದಂದು ಆರಂಭಗೊಳ್ಳುತ್ತದೆ. ಯಾತ್ರಿಕರು, ಆಗಸ್ಟ್ 10, ಶನಿವಾರದ ದಿನವನ್ನು ಅರಫಾತ್ ಬೆಟ್ಟದಲ್ಲಿ ಕಳೆಯುತ್ತಾರೆ ಹಾಗೂ ಆಗಸ್ಟ್ 11 ರವಿವಾರ ಈದುಲ್ ಅಝ್ಹ ಆರಂಭಗೊಳ್ಳುತ್ತದೆ.

ಬುಧವಾರದ ವೇಳೆಗೆ, 12,49,951  ಹಜ್ ಯಾತ್ರಿಕರು ಸೌದಿ ಅರೇಬಿಯ ತಲುಪಿದ್ದಾರೆ ಎಂದು ಸೌದಿ ಪಾಸ್‌ಪೋರ್ಟ್ಸ್ ಮಹಾ ನಿರ್ದೇಶನಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News