ಉಡುಪಿ: ನೆಲ, ಅರಣ್ಯ, ಜಲ ಸಮೃದ್ಧಿ ಸಿದ್ಧಿ ಸಂಕಲ್ಪಕಾರ್ಯಾಗಾರ
ಉಡುಪಿ, ಆ.3: ಉಡುಪಿ ಜಿಲ್ಲಾಡಳಿತ, ಜಿಪಂ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಉಡುಪಿ, ಜಿಲ್ಲಾ ನಿರ್ಮಿತಿ ಕೇಂದ್ರ ಇವರ ಸಹಯೋಗ ದೊಂದಿಗೆ ಸ್ಥಳೀಯಾಡಳಿತ ಸಂಸ್ಥೆಯ ಸದಸ್ಯರು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಗಳು ಹಾಗೂ ಇಲಾಖೆ ಅಧಿಕಾರಿಗಳಿಗೆ ನೀರಿನ ಸಂರಕ್ಷಣೆ ಕುರಿತು ಜಾಗೃತಿ ಅರಿವು ಮೂಡಿಸುವ ಸಲುವಾಗಿ ‘ನೀರು ಆರುವ ಮುನ್ನ ನೆಲ ಅರಣ್ಯ- ಜಲ- ಸಮೃದ್ಧಿ ಸಿದ್ಧಿ ಸಂಕಲ್ಪ’ ವಿಷಯದ ಕುರಿತು ಕಾರ್ಯಾಗಾರ ಆ.6ರಂದು ಬೆಳಗ್ಗೆ 10ರಿಂದ ಸಂಜೆ 5:00ರವರೆಗೆ ಮಣಿಪಾಲದಲ್ಲಿರುವ ವಾಜಪೇಯಿ ಸಭಾ ಭವನದಲ್ಲಿ ನಡೆಯಲಿದೆ.
ಪರಿಸರ ಹೋರಾಟಗಾರರಾದ ಕೇಮಾರು ಮಠದ ಈಶ ವಿಠ್ಠಲದಾಸ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಉಡುಪಿ ಶಾಸಕ ಕೆ. ರಘುತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ಪರಿಸರ ಹೋರಾಟಗಾರರಾದ ಕೇಮಾರು ಮಠದ ಈಶ ವಿಠ್ಠಲದಾಸ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಉಡುಪಿ ಶಾಸಕ ಕೆ. ರಘುಪತಿ ಟ್‌ಅ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕುಂದಾಪುರ ಶಾಸಕ ಹಾಲಾಡಿ ಶ್ರೆನಿವಾಸ ಶೆಟ್ಟಿ, ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ, ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೆನಿವಾಸ ಪೂಜಾರಿ, ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿಂಧು ಬಿ. ರೂಪೇಶ್, ಮುಖ್ಯ ಯೋಜನಾಧಿಕಾರಿ ಎ.ಶ್ರೀನಿವಾಸ್ ರಾವ್, ನಿರ್ಮಿತಿ ಕೇಂದ್ರ ಯೋಜನಾ ಧಿಕಾರಿ ಅರುಣ್ ಕುಮಾರ್ ಭಾಗವಹಿಸಲಿದ್ದಾರೆ.
ಜಲ ಸಮೃದ್ಧಿ, ಮಳೆ ಕೊಯ್ಲು, ಜಲ ಮರುಪೂರಣ, ಬೋರ್‌ವೆಲ್ ರೀಚಾರ್ಜ್, ಹಸಿರೀಕರಣದ ಜಾಗೃತಿ ಅರಿವು ಮೂಡಿಸುವ ಈ ಕಾರ್ಯಕ್ರಮ ದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅ್ಯುದಯ ಪತ್ರಕರ್ತ ನೆಲ ಜಲ ಪರಿಸರ ತಜ್ಞ ಶ್ರೀಪಡ್ರೆ, ಚಿತ್ರದುರ್ಗದ ಭೂಗರ್ ಅಂತರ್ಜಲ ಶಾಸ್ತ್ರಜ್ಞ ಡಾ.ಎನ್.ಜಿ. ದೇವರಾಜ್ ರೆಡ್ಡಿ, ಸಾಂಪ್ರದಾಯಿಕ ಪರಿಸರ ತಜ್ಞ ವಿನಯಚಂದ್ರ ಸಾಸ್ತಾನ ಬಾಗವಹಿಸಲಿದ್ದಾರೆ ಎಂದು ಜಿಪಂ ಅಧ್ಯಕ್ಷ ದಿನಕರ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.