ರಿಚರ್ಡ್ ಕ್ಯಾಸ್ಟಲಿನೋ ಕರಾವಳಿ ಸಾಂಸ್ಕ್ರತಿಕ ರಂಗದ ರಾಯಬಾರಿ: ಡಾ.ಬಿ.ಎ.ವಿವೇಕ್ ರೈ
ಮಂಗಳೂರು, ಅ.3: ರಿಚರ್ಡ್ ಕ್ಯಾಸ್ಟಲಿನೋ ತುಳು,ಕನ್ನಡ,ಕೊಂಕಣಿ ಚಲನಚಿತ್ರಗಳ ಮೂಲಕ ಕರಾವಳಿಯ ಸಾಂಸ್ಕ್ರತಿಕ ಬದುಕನ್ನು ವಿಶ್ವಕ್ಕೆ ಪರಿಚಯಿಸಿ ಕರಾವಳಿ ಸಾಂಸ್ಕ್ರತಿಕ ರಂಗದ ರಾಯಬಾರಿ ಯಾಗಿ ದ್ದಾರೆ ಎಂದು ಕನ್ನಡ ವಿಶ್ವವಿದ್ಯಾನಿಲ ಯದ ಕುಲಪತಿ ಡಾ.ಬಿ.ಎ.ವಿವೇಕ ರೈ ತಿಳಿಸಿದ್ದಾರೆ.
ಕರ್ನಾಟಕ ಚಲನಚಿತ್ರ ಅಕಾಡೆಮಿಯ ವತಿಯಿಂದ ವಿಶ್ವ ವಿದ್ಯಾನಿಲ ಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಹಮ್ಮಿಕೊಂಡ ಬೆಳ್ಳಿ ಹೆಜ್ಜೆ ಕಾರ್ಯಕ್ರಮ ನಮ್ಮೊಂದಿಗೆ ಡಾ.ರಿಚರ್ಡ್ ಕ್ಯಾಸ್ಟಲಿನೋ ಗೌರವಾರ್ಪಣೆ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ತುಳು ಚಲನ ಚಿತ್ರರಂಗದಲ್ಲಿ ಚಿತ್ರ ನಿರ್ಮಾಪಕರು ಹಲವು ಸಂಕಷ್ಟಗಳಲ್ಲಿ ಸಿಲುಕಿದ್ದರೂ ಈ ನಡುವೆ ಛಲಗಾರನಾಗಿ ಹೋರಾಟಗಾರನಾಗಿ ಕರಾವಳಿಯ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಂಡ ವರು.ವಿಶ್ವ ಕುಟುಂಬದ ಆಶಯದೊಂದಿಗೆ ಚಲನಚಿತ್ರ ನಿರ್ಮಿಸಿದವರು.ಅವರಿಗೆ ತಡವಾಗಿಯಾದರೂ ಗೌರವ ದೊರೆತಿರುವುದು ಅಭಿನಂದನೀಯ ಎಂದರು.
ಕಲೆ, ಸಂಸ್ಕ್ರತಿ ಅಕಾಡೆಮಿಗಳ ನೇಮಕಾತಿಗಳನ್ನು ರಾಜಕೀಯ ವಾಗಿ ವಿಂಗಡಿಸಿ ನೋಡುವುದು ಸರಿಯಲ್ಲ
ಕಳೆದ ಸುಮಾರು ಎಂಟು ವರ್ಷಗಳಿಂದ ರಾಜಕೀ ಯ ಪಕ್ಷಗಳು ಅಧಿಕಾರಕ್ಕೆ ಬಂದಾಗ ಕಲೆ ಮತ್ತು ಸಾಂಸ್ಕ್ರತಿ ಅಕಾಡೆಮಿಗಳ ಅಧ್ಯಕ್ಷರು ಗಳನ್ನು ಬದಲಾಯಿಸುವ ತಪ್ಪು ನಡೆಯುತ್ತಾ ಬಂದಿದೆ.ಈ ಕ್ರಮ ಸರಿಯಲ್ಲ ಹಿಂದೆ ನಮ್ಮ ರಾಜ್ಯದಲ್ಲಿ ಈ ರೀತಿಯ ಕ್ರಮಗಳಿರಲಿಲ್ಲ ಎಂದು ಡಾ.ವಿವೇಕ ರೈ ತಿಳಿಸಿದ್ದಾರೆ.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕರ್ನಾಟಕ ಚಲನಚಿತ್ರ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ ಮಾತನಾಡುತ್ತಾ, ನಮ್ಮ ನೆಲದ ಕಥೆಗಳ ಮೂಲಕ ನಮ್ಮ ನಾಡಿನ ಕಲಾವಿದರ ಸ್ರಜನ ಶೀಲತೆ ವ್ಯಕ್ತವಾಗಬೇಕು ಆಗ ಆ ಕ್ರತಿ ವಿಶ್ವಮಾನ್ಯತೆ ಗಳಿಸಬಹುದು.ಕರಾವಳಿಯ ಲ್ಲಿ ಕನ್ನಡಕ್ಕೆ ಪರ್ಯಾವಾದ ರೀತಿಯಲ್ಲಿ ತುಳುಚಿತ್ರರಂಗ ಬೆಳೆಯುತ್ತಿದೆ.ಆದರೆ ಈ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಗಳ ಗುಣಮಟ್ಟದ ಬಗ್ಗೆ ಯೂ ಎಚ್ಚರ ವಿರಲಿ ಎಂದರು ನಾಗತಿಹಳ್ಳಿ ತಿಳಿಸಿದ್ದಾರೆ.
ಮಂಗಳೂರು ವಿಶ್ವವಿ ದ್ಯಾನಿಲಯದ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ,ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ,ಮಂಗಳೂರು ವಿಶ್ವವಿ ದ್ಯಾನಿಲ ಯ ಕಾಲೇಜಿನ ಪ್ರಾಂಶುಪಾಲ ಡಾ.ಉದಯ ಕುಮಾರ್ ಇರ್ವತ್ತೂರು. ಕರ್ನಾಟಕ ಚಲನಚಿತ್ರ ಅಕಾಡಮಿ ಯ ರಿಜಿಸ್ಟ್ರಾರ್ ಹೆಚ್.ಬಿ.ದಿನೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದ್ದಾರೆ.
ಶಶಿರಾಜ್ ಕಾವೂರು ಕಾರ್ಯಕ್ರಮ ನಿರೂಪಿಸಿದರು.ರಿಚರ್ಡ್ ಕ್ಯಾಸ್ಟಲಿನೋ ಅವರ ಬಗೆಗಿನ ಯಾಕೂಬ್ ಖಾದರ್ ಗುಲ್ವಾಡಿ ನಿರ್ದೇಶಿಸಿದ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾ ಯಿತು. ಡಾ.ನಾ. ದಾಮೋದರ ಶೆಟ್ಟಿ ಸಂವಾದ ಕಾರ್ಯಕ್ರಮ ವನ್ನು ನಿರೂಪಿಸಿ ದರು.ಜಿಲ್ಲಾವಾರ್ತಾಧಿಕಾರಿ ಖಾದರ್ ಷಾ ಸ್ವಾಗತಿಸಿದರು.