ಪೆರ್ಣಂಕಿಲ: ಕೆಸರ್ಡ್ ಒಂಜಿ ದಿನ ಗ್ರಾಮೀಣ ಕ್ರೀಡಾಕೂಟ

Update: 2019-08-03 15:26 GMT

ಹಿರಿಯಡ್ಕ, ಆ.3: ವಾರ್ವಾಡಿ ಫ್ರೆಂಡ್ಸ್ ವತಿಯಿಂದ ಕೆಸರ್ಡ್ ಒಂಜಿ ದಿನ ಗ್ರಾಮೀಣ ಕ್ರೀಡಾಕೂಟ ಇತ್ತೀಚೆಗೆ ಪೆರ್ಣಂಕಿಲ ವಾರ್ವಾಡಿ ಗ್ರಾಮದ ಗದ್ದೆಯಲ್ಲಿ ಜರಗಿತು.

ಇದೇ ಮೊದಲ ಬಾರಿಗೆ ಆಯೋಜಿಸಲಾದ ಗ್ರಾಮೀಣ ಕ್ರೀಡಾಕೂಟದಲ್ಲಿ ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ಪಾಲ್ಗೊಂಡಿದ್ದರು. ಕೆಸರು ಗದ್ದೆಗಿಳಿದ ಯುವಕ ಯುವತಿಯರು ಕೆಸರನ್ನು ಮೈಗೆ ಎರಚಿಕೊಂಡು, ಕುಣಿದು ಕುಪ್ಪಳಿಸಿದರು.

ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ಲಿಂಬೆ ಚಮಚ ಓಟ, ಒಂಟಿ ಕಾಲಿನ ಓಟ, ಹಾಳೆ ಓಟ, ಕೆಸರು ಗದ್ದೆ ಓಟ, ಕೆಸರಿನಲ್ಲಿ ನಿಧಿ ಶೋಧನೆ, ಹಗ್ಗಜಗ್ಗಾಟ ಈ ಮೊದಲಾದ ಗ್ರಾಮೀಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಈ ಸಂದರ್ಭ ದಲ್ಲಿ ಊರಿನ ಹಿರಿಯರಾದ ಸುಭಾಷ್ ಹೆಗ್ಡೆ, ಪ್ರಕಾಶ್ ಶೆಟ್ಟಿ, ಜಗದೀಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News