×
Ad

ಬಸವ ಸಿದ್ಧಾಂತ ಅನುಸರಿಸುವವರೆಲ್ಲಾ ಲಿಂಗಾಯಿತರೇ: ಡಾ. ಪಂಡಿತಾರಾಧ್ಯ ಸ್ವಾಮೀಜಿ

Update: 2019-08-03 21:02 IST

ಮಂಗಳೂರು: ತಾತ್ವಿಕವಾಗಿ ಬಸವ ಸಿದ್ಧಾಂತವನ್ನು ಯಾರೆಲ್ಲಾ ಒಪ್ಪುತ್ತಾರೋ ಅವರೆಲ್ಲಾ ಲಿಂಗಾಯಿತರು. ಓದಿ ಆಚರಣೆಯಲ್ಲಿ ತಾರದಿದ್ದರೆ ನಿಮ್ಮನ್ನು ಲಿಂಗಾಯಿತರೆಂದು ಹೇಳಲು ಹೇಗೆ ಸಾಧ್ಯ ? ಈ ಹೇಳಿಕೆ ಯಡಿಯೂರಪ್ಪನವರಿಗೆ ಮಾತ್ರ ಸೀಮಿತವಾಗಿಲ್ಲ. ಬಸವ ಸಿದ್ಧಾಂತವನ್ನು ಯಾರೆಲ್ಲಾ ಒಪ್ಪಿ ಅನುಸರಿಸುವ ಯಾರೇ ಆದರೂ ಲಿಂಗಾಯಿತರು ಎಂದು ಅವರೂ ಲಿಂಗಾಯಿತರು ಎಂದು ಸಾಣೇಹಳ್ಳಿ ಶ್ರೀ ಮಠದ ಡಾ. ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

‘ಯಡಿಯೂರಪ್ಪ ಲಿಂಗಾಯಿತರಲ್ಲ’ ಎಂಬುದಾಗಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆಂಬ ವರದಿಗೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಮಾಧ್ಯಮದಲ್ಲಿ ನನ್ನ ಹೇಳಿಕೆ ತಪ್ಪಾಗಿ ವರದಿಯಾಗಿದೆ.

‘ಯಡಿಯೂರಪ್ಪರು ಲಿಂಗಾಯಿತ ಧರ್ಮದ ಮುಖ್ಯಮಂತ್ರಿಯಾಗಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ?’ ಎಂದು ಮಾಧ್ಯಮದವರು ಕೇಳಿದಕ್ಕೆ ಅವರನ್ನು ಲಿಂಗಾಯಿತ ಎಂದು ಯಾಕೆ ಗುರುತಿಸುವುದು. ಸಿದ್ದರಾಮಯ್ಯರಾಗಲಿ, ಕುಮಾರಸ್ವಾಮಿಯವರಲಾಗಲಿ ಲಿಂಗಾಯಿತ ಧರ್ಮದ ತತ್ತ್ವ ಸಿದ್ಧಾಂತ ಒಪ್ಪುವವರೆಲ್ಲರೂ ಲಿಂಗಾಯಿತರೆಂದು ಹೇಳಿದ್ದೆ ಎಂದರು.

ಲಿಂಗಾಯಿತ ಎನ್ನುವುದು ಜಾತಿ ಅಲ್ಲ. ಅದು ತತ್ವ, ಒಂದು ಸಿದ್ಧಾಂತ. ಬಸವ ತತ್ವದ ಆಚರಣೆಗಳನ್ನು ಜಾರಿಯಲ್ಲಿ ತರುವ ಯಾವುದೇ ವ್ಯಕ್ತಿಯಾಗಿದ್ದರೂ ಅವರು ಲಿಂಗಾಯಿತರು. ಕೇವಲ ಯಡಿಯೂರಪ್ಪ ಅವರೊಬ್ಬರನ್ನು ಮಾತ್ರ ಲಿಂಗಾಯಿತರೆಂದು ಕರೆಯುವುದು ಎಂದು ಹೇಳಿದ್ದೆ.

ಮತ್ತೆ ಕಲ್ಯಾಣ ವಿವಿಧ ಜಿಲ್ಲೆಗಳಲ್ಲಿ ವಿವಿಧ ಸ್ವರೂಪಗಳಲ್ಲಿ ನಡೆಯಲಿದೆ. ಮಕ್ಕಳಿಗೆ ಸಾಣೆಹಳ್ಲಿಯಲ್ಲಿ ರಾಜ್ಯ ಮಟ್ಟದ 20 ದಿನಗಳ ಕಾಲ ಕಾರ್ಯಾಗಾರ ನಡೆಸಲಾಗುವುದು. ಅದರಲ್ಲಿ ವ್ಯಕ್ತಿತ್ವ ವಿಕಸನದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಆಯಾಯ ಜಿಲ್ಲೆಯಲ್ಲಿ ಸಮಿತಿಗಳು ಚಾಲನೆಯಲ್ಲಿದ್ದು, ಇಂತಹ ಕಾರ್ಯಗಳ ಮೂಲಕ ಯುವ ಪೀಳಿಗೆಗೆ ದಾರಿ ತೋರಿಸುವ ಕೆಲಸವನ್ನು ಮಾಡಲಿವೆ.

ಮುಂದಿನ ಪೀಳಿಗೆಯ ಮಕ್ಕಳಿಗೆ ನೈತಿಕ ಶಿಕ್ಷಣ, ಜೀವನದ ವೌಲ್ಯಗಳನ್ನು ಹೊಸ ಸಮಾಜದ ಕಡೆ ಮುಖಮಾಡುವ ಕಡೆ ಪ್ರಯತ್ನವೇ ಮತ್ತೆ ಕಲ್ಯಾಣ. ಮತ್ತೆ ಕಲ್ಯಾಣವೆಂದರೆ ಯಾರನ್ನೂ ಬಸವ ತತ್ವಕ್ಕೆ ಕೊಂಡೊಯ್ಯುವಂತದ್ದಲ್ಲ. ಸಮಾಜದಲ್ಲಿರುವ ಅನಿಷ್ಟಗಳು ನಮ್ಮನ್ನು ಕಾಡುತ್ತಿವೆಯೋ ಅದನ್ನು ಹೋಗಲಾಡಿಸುವುದು ಇದರ ಹಿಂದಿನ ಉದ್ದೇಶ ಎಂದು ಅವರು ಮತ್ತೆ ಕಲ್ಯಾಣ ಕಾರ್ಯಕ್ರಮದ ಬಗ್ಗೆ ಮಾಹಿತಿ ಒದಗಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News