ಆರ್‌ಎಸ್‌ಬಿ ಕೊಂಕಣಿ ಭಾಷಿಕ ‘ಅಮ್ಮ’ ಚಿತ್ರ ಬಿಡುಗಡೆ
Update: 2019-08-03 21:06 IST
ಉಡುಪಿ, ಆ.3: ಆರ್.ಎಸ್.ಬಿ ಕೊಂಕಣಿ ಭಾಷಿಕ ಚಿತ್ರ ‘ಅಮ್ಮ’ ಬಿಡು ಗಡೆ ಸಮಾರಂಭವು ಸಗ್ರಿಯಲ್ಲಿ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಚಲನಚಿತ್ರ ಕಲಾವಿದ ಪ್ರಕಾಶ್ ನಾಯಕ್ ಮಾತನಾಡಿ, ಆರ್‌ಎಸ್‌ಬಿ ಭಾಷಿಕ ಮೊತ್ತ ಮೊದಲ ಕಿರುಚಿತ್ರ ಇದಾಗಿದ್ದು, ಎಲ್ಲಾ ಕೊಂಕಣಿ ಭಾಷಿಕ ಪ್ರೇಮಿಗಳು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಹರೀಶ್ ಭಾರಧ್ವಜ್ ಶುಭಹಾರೈಸಿದರು. ಚಿತ್ರ ನಿರ್ದೇಶಕ ಸಂದೀಪ್ ಕಾಮತ್, ಸಿನೇಮಾಟೋಗ್ರಾಪರ್ ಭುವನೇಶ್ ಪ್ರಭು ಹಿರೇಬೆಟ್ಟು, ಕಲಾವಿದರುಗಳಾದ ಲಕ್ಷ್ಮೀಂದ್ರ ಪೆರಂಪಳ್ಳಿ, ಇಡ್ಲಿ ರಾಜ, ಭವ್ಯಾ, ರಶ್ಮಿ ನಾಯಕ್ ಕಾರ್ಕಳ, ಕಾರ್ತಿಕ್ ಪ್ರಭು ಕುಕ್ಕೆಹಳ್ಳಿ, ದೇವರಾಜ್ ಪೂಜಾರಿ ತೋಕೋಳಿ, ಪ್ರಸಾದ್ ನಾಯಕ್, ಪ್ರವೀಣ್ ನಾಯಕ್ ಶಿರ್ವ, ಸಂದೇಶ್ ನಾಯಕ್, ವಿಜಯ್, ಸುಧೀರ್ ತೋಕೋಳಿ, ಕಾರ್ತಿಕ್ ಸಗ್ರಿ, ಸುಮತಿ ಕಾಮತ್ ಮಣಿಪಾಲ, ರೋಹನ್ ನಾಯಕ್ ಉಪಸ್ಥಿತರಿದ್ದರು.