ಮಂಚಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ರಾಜೇಶ್ ನಾಯ್ಕ್ ಭೇಟಿ
ಬಂಟ್ವಾಳ, ಆ. 3: ಮಂಚಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಬಳಿಕ ಕೇಂದ್ರದ ನೂತನ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದರು. ಮುಂದಿನ ದಿನಗಳಲ್ಲಿ ಹೊಸ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೆ ದಿನ ನಿಗದಿಪಡಿಸುವಂತೆ ಶಾಸಕರು ಆರೋಗ್ಯಾಧಿಕಾರಿಯವರಿಗೆ ಸೂಚಿಸಿದರು.
ಈ ಕೇಂದ್ರದಲ್ಲಿ ವೈದ್ಯರು, ಸ್ಟಾಪ್‍ನಸ್9ಗಳ ಕೊರತೆ ಇದ್ದು, ಅವುಗಳ ಹುದ್ದೆಯನ್ನು ಭರ್ತಿಗೊಳಿಸಿ ಈ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯಚರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಶಾಸಕರು ಈಗಾಗಲೇ ಖಾಲಿ ಇರುವ ಹುದ್ದೆಯ ಪಟ್ಟಿಯನ್ನು ಕೇಳಲಾಗಿದೆ ಎಂದರು. ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಬಿಜೆಪಿ ಮುಖಂಡ ರಮೇಶ್ ರಾವ್, ಗ್ರಾಪಂ ಅಧ್ಯಕ್ಷೆ ಪ್ರಮೀಳಾ, ಗ್ರಾಪಂ ಉಪಾಧ್ಯಕ್ಷ ಮೋಹನ್‍ದಾಸ್ ಶೆಟ್ಟಿ, ಗ್ರಾಪಂ ಸದಸ್ಯರಾದ ಪ್ರಭಾಕರ ಶೆಟ್ಟಿ, ಸುಮತಿ, ಸುಮಾ, ಪುಷ್ಪಾ ಎಸ್. ಕಾಮತ್, ಕೃಷ್ಣಪ್ಪ ಬಂಗೇರ, ಉದಯ ಶಂಕರ, ಬಾಲಕೃಷ್ಣ ಸೆರ್ಕಳ, ಎ.ಕೆ.ಹ್ಯಾರಿಸ್, ಪುರುಷೋತ್ತಮ ಸಾಲ್ಯಾನ್, ವಿಜಿತ್ ಅಡ್ಯಂತಾಯ, ನಾರಾಯಣ ಖಂಡಿಗ, ಗೋವಿಂದ ನಾಯಕ್ ಉಪಸ್ಥಿತರಿದ್ದರು.