ಇಂಡೋನೇಶ್ಯ ಭೂಕಂಪ: 4 ಸಾವು

Update: 2019-08-03 17:01 GMT

ಜಕಾರ್ತ (ಇಂಡೋನೇಶ್ಯ), ಆ. 3: ಇಂಡೋನೇಶ್ಯದ ಸುಮಾತ್ರ ಮತ್ತು ಜಾವಾ ದ್ವೀಪಗಳ ಸಮುದ್ರದಡಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಹಾಗೂ ನೂರಾರು ಕಟ್ಟಡಗಳು ಹಾನಿಗೊಳಗಾಗಿವೆ ಎಂದು ದೇಶದ ವಿಪತ್ತು ನಿರ್ವಹಣಾ ಸಂಸ್ಥೆ ಶನಿವಾರ ತಿಳಿಸಿದೆ.

ರಿಕ್ಟರ್ ಮಾಪಕದಲ್ಲಿ 6.8ರ ತೀವ್ರತೆ ಹೊಂದಿದ ಭೂಕಂಪ ಸಂಭವಿಸಿದ ತಕ್ಷಣ ಇಂಡೋನೇಶ್ಯ ಸುನಾಮಿ ಎಚ್ಚರಿಕೆಯನ್ನು ಹೊರಡಿಸಿತು. ಎರಡು ಗಂಟೆಗಳ ಅವಧಿಗೆ ಸುನಾಮಿ ಎಚ್ಚರಿಕೆ ಚಾಲ್ತಿಯಲ್ಲಿತ್ತು. ಕರಾವಳಿ ತೀರದ ಜನರು ಎತ್ತರದ ಪ್ರದೇಶಗಳಿಗೆ ತೆರಳಿದರು. ಬಳಿಕ ಎಚ್ಚರಿಕೆಯನ್ನು ವಾಪಸ್ ಪಡೆದುಕೊಳ್ಳಲಾಯಿತು.

ನಾಲ್ವರು ಮೃತಪಟ್ಟಿದ್ದಾರೆ ಹಾಗೂ ಆ ಪೈಕಿ ಕೆಲವರು ತೀರಪ್ರದೇಶದಿಂದ ಎತ್ತರದ ಸ್ಥಳಗಳಿಗೆ ಧಾವಿಸುವಾಗ ಉಂಟಾದ ಬಳಲಿಕೆಯಿಂದಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಹಣೆ ಸಂಸ್ಥೆಯ ವಕ್ತಾರರೊಬ್ಬರು ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News